Mangaluru: ಅಬ್ಬಕ್ಕ ಭವನ ಪಕ್ಕದಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ಭಜರಂಗದಳ ವಿರೋಧ
ಸರ್ಕಾರದ ಅಧೀನದಲ್ಲಿ ಬರುವ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ( Bhyari Bhavan)ಸ್ವಂತ ಕಟ್ಟಡವಿಲ್ಲ. ಸದ್ಯ ಮಂಗಳೂರಿನ (Mangaluru) ತಾಲ್ಲೂಕು ಕಚೇರಿ ಬಳಿ ಇರುವ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ನೂತನ ಕಟ್ಟಡ ಬೇಕೆಂದು ಬ್ಯಾರಿ ಸಂಘದ ಅಧ್ಯಕ್ಷ ರಹೀಂ ಉಚ್ಚಲ್, ಸರ್ಕಾರದ ಮೇಲೆ ಒತ್ತಡ ತಂದಿದ್ದರು.
ಮಂಗಳೂರು (ಜ. 23): ಸರ್ಕಾರದ ಅಧೀನದಲ್ಲಿ ಬರುವ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ( Bhyari Bhavan)ಸ್ವಂತ ಕಟ್ಟಡವಿಲ್ಲ. ಸದ್ಯ ಮಂಗಳೂರಿನ (Mangaluru) ತಾಲ್ಲೂಕು ಕಚೇರಿ ಬಳಿ ಇರುವ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ನೂತನ ಕಟ್ಟಡ ಬೇಕೆಂದು ಬ್ಯಾರಿ ಸಂಘದ ಅಧ್ಯಕ್ಷ ರಹೀಂ ಉಚ್ಚಲ್, ಸರ್ಕಾರದ ಮೇಲೆ ಒತ್ತಡ ತಂದಿದ್ದರು. ತೊಕ್ಕೊಟ್ಟು ಎಂಬಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿಸಿ, 6 ಕೋಟಿ ರೂ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದರು.
Smart City: ಯೋಜನೆ ನೆಪದಲ್ಲಿ ಕದ್ರಿ ಪಾರ್ಕ್‌ನ ಕಿಷ್ಕಿಂದೆ ಮಾಡಲು ಹೊರಟ MCC..!
ಆದರೆ ಈ ಜಾಗದ ಪಕ್ಕದಲ್ಲಿ ಕೆಲವು ವರ್ಷಗಳ ಹಿಂದೆ ಅಬ್ಬಕ್ಕ ಭವನ ನಿರ್ಮಾಣಕ್ಕೆ ಜಾಗ ಮೀಸಲಿಟ್ಟಿದ್ದರು. ಈ ವರೆಗೆ ಕಾಮಗಾರಿ ಆರಂಭವಾಗಿಲ್ಲ. ಈ ಜಾಗದ ಪಕ್ಕದಲ್ಲಿ ಬ್ಯಾರಿ ಭವನ ಬೇಡವೆಂದು ಸಂಘ ಪರಿವಾರ, ಭಜರಂಗದಳ ತಗಾದೆ ತೆಗೆದಿದೆ. ಕಟ್ಟಡ ನಿರ್ಮಾಣಕ್ಕೆ ಬಂದ ಕೆಲಸಗಾರರನ್ನು ವಾಪಸ್ ಕಳುಹಿಸಿದೆ. ಅಬ್ಬಕ್ಕ ಭವನ ಪಕ್ಕದಲ್ಲಿ ಬ್ಯಾರಿ ಭವನ ನಿರ್ಮಾಣ ಮಾಡಲು ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.