ಪ್ರವಚನ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಸ್ವಾಮೀಜಿ ಸಾವು: ಮೊಬೈಲ್‌ನಲ್ಲಿ ದೃಶ್ಯ ಸೆರೆ

*  ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದಲ್ಲಿ ನಡೆದ ಘಟನೆ
*  ತಮ್ಮದೇ ಹುಟ್ಟು ಹಬ್ಬದಂದು ಪ್ರವಚನ ನೀಡುತ್ತಿದ್ದ ಸ್ವಾಮೀಜಿ 
*  ಶೋಕಸಾಗರದಲ್ಲಿ ಮುಳುಗಿದ ಭಕ್ತವೃಂದ 

First Published Nov 16, 2021, 12:50 PM IST | Last Updated Nov 16, 2021, 12:50 PM IST

ಬೆಳಗಾವಿ(ನ.16):  ಪ್ರವಚನ ಮಾಡುತ್ತಿರುವಾಗಲೇ ಸ್ವಾಮೀಜಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದಲ್ಲಿ ನಡೆದಿದೆ.  ನವೆಂಬರ್‌ 6 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಸವಯೋಗ ಮಂಟಪ ಟ್ರಸ್ಟ್ ಬಳೋಬಾಳ ಮಠದ ಸಂಗನಬಸವ ಮಹಾಸ್ವಾಮೀಜಿ(53) ತೀವ್ರ ಹೃದಯಾಘಾತದಿಂದ ಇಹಲೋಹ ತ್ಯಜಿಸಿದ್ದಾರೆ.  

ಪಾಸ್ ಇದ್ದವರಿಗೆ ಮಾತ್ರ ಪುನೀತ್ ರಾಜ್‌ಕುಮಾರ್ ನಮನಕ್ಕೆ ಎಂಟ್ರಿ!

ತಮ್ಮದೇ ಹುಟ್ಟು ಹಬ್ಬದಂದು ಪ್ರವಚನ ನೀಡುತ್ತಿದ್ದ ಸಂಗನಬಸವ ಮಹಾಸ್ವಾಮೀಜಿ ಅವರು ಹೃದಯಾಘಾತದಿಂದ ಸಾವನ್ನಪ್ಪಿರುವುದರಿಂದ ಭಕ್ತವೃಂದ ಶೋಕಸಾಗರದಲ್ಲಿ ಮುಳುಗಿದೆ. ನವೆಂಬರ್‌ 6 ರಂದು ತಮ್ಮದೇ ಹುಟ್ಟುಹಬ್ಬ ಆಚರಿಸಿ ಸ್ವಾಮೀಜಿ ಆಶೀರ್ವಚನ ನೀಡುತ್ತಿದ್ದರು. ಪ್ರವಚನ ನೀಡುತ್ತಿದ್ದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸ್ವಾಮೀಜಿ ಅವರು ತಮ್ಮ ಪಪ್ರವಚನದಲ್ಲಿ ಕಲಾವಿದೆ ಪರ ನಿಲ್ಲಬೇಕು ಅವರಿಗೆ ಸಹಾಯ ಮಾಡಿ ಎಂದು ಅಭಿಮಾನಿಗಳಲ್ಲಿ ಕೊನೆಯದಾಗಿ ಮನವಿ ಮಾಡಿಕೊಂಡಿದ್ದರು. 

Video Top Stories