Asianet Suvarna News Asianet Suvarna News

ಬಿಜೆಪಿ ಸ್ಥಿತಿ ಹೇಗಿದೆ? ಮೋದಿಗೆ ಪ್ರಶ್ನೆ ಎಸೆದ ಸಾಗರದ ಯುವಕ... ವಿಡಿಯೋ ವೈರಲ್

ಬಾವುಟ ಕಟ್ಟುವಾಗ ಜಾತಿ ಕೇಳಲಿಲ್ಲ, ಹಣ ಇದೆಯೇ ಎನ್ನಲಿಲ್ಲ. ಆದರೆ ಈಗ ಟಿಕೆಟ್ ಕೊಡಿ ಎಂದರೆ ಜಾತಿ, ಹಣ ಎಲ್ಲವನ್ನೂ ಕೇಳುತ್ತಾರೆ. ಜಾತ್ಯತೀತ ಪಕ್ಷ ಎಂದು ನಂಬಿಕೊಂಡು ಬಂದ ಬಿಜೆಪಿಯ ಪಕ್ಷದಲ್ಲಿನ ನನ್ನ ಸ್ಥಿತಿ ಹೀಗಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನನಗೆ ಅಪಾರ ಗೌರವವಿದೆ, ಪಕ್ಷದ ಬಗ್ಗೆ ಭಕ್ತಿಯಿದೆ.ಆದರೆ ನನ್ನಂತಹ ಕಾರ್ಯಕರ್ತರು ಇದನ್ನು ನಂಬಿಕೊಂಡು ಹಾಳಾಗಬಾರದು’ ಹೀಗೆಂದು ಯುವಕನೋರ್ವ ಪ್ರಧಾನಿ ನರೇಂದ್ರ ಮೋದಿಯವರ ಭಾವ ಚಿತ್ರದ ಮುಂದೆ  ನಿಂತುಕೊಂಡು ಹೇಳಿ ಕೊಳ್ಳುವ ದೃಶ್ಯವೊಂದು ಇದೀಗ ವೈರಲ್ ಆಗಿದೆ.

ಬಾವುಟ ಕಟ್ಟುವಾಗ ಜಾತಿ ಕೇಳಲಿಲ್ಲ, ಹಣ ಇದೆಯೇ ಎನ್ನಲಿಲ್ಲ. ಆದರೆ ಈಗ ಟಿಕೆಟ್ ಕೊಡಿ ಎಂದರೆ ಜಾತಿ, ಹಣ ಎಲ್ಲವನ್ನೂ ಕೇಳುತ್ತಾರೆ. ಜಾತ್ಯತೀತ ಪಕ್ಷ ಎಂದು ನಂಬಿಕೊಂಡು ಬಂದ ಬಿಜೆಪಿಯ ಪಕ್ಷದಲ್ಲಿನ ನನ್ನ ಸ್ಥಿತಿ ಹೀಗಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನನಗೆ ಅಪಾರ ಗೌರವವಿದೆ, ಪಕ್ಷದ ಬಗ್ಗೆ ಭಕ್ತಿಯಿದೆ.ಆದರೆ ನನ್ನಂತಹ ಕಾರ್ಯಕರ್ತರು ಇದನ್ನು ನಂಬಿಕೊಂಡು ಹಾಳಾಗಬಾರದು’

ಹೀಗೆಂದು ಯುವಕನೋರ್ವ ಪ್ರಧಾನಿ ನರೇಂದ್ರ ಮೋದಿಯವರ ಭಾವ ಚಿತ್ರದ ಮುಂದೆ  ನಿಂತುಕೊಂಡು ಹೇಳಿ ಕೊಳ್ಳುವ ದೃಶ್ಯವೊಂದು ಇದೀಗ ವೈರಲ್ ಆಗಿದೆ.

ಸಾಗರದ ಯುವ ಬಿಜೆಪಿ ಅಧ್ಯಕ್ಷರೂ, ಆಟೋ ಡ್ರೈವರ್ ಆದ ಗಣೇಶ್ ಗಟ್ಟಿ ಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಎದುರು ಕೈಮುಗಿದು ನಿಂತುಕೊಂಡು ಈ ರೀತಿ ಮಾತನಾಡಿದ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ.

‘ನಾನು ಬಿಜೆಪಿ ಯುವಮೋರ್ಚಾ ಸದಸ್ಯ ನಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷನಾಗಿ 9  ವರ್ಷ ಸೇವೆ ಸಲ್ಲಿಸಿದ್ದೇನೆ. ಸಾಮಾನ್ಯ ಆಟೋ ಡ್ರೈವರ್ ಆದ ನನಗೆ ಜಾತಿಯಿಲ್ಲ, ಹಣ ಇಲ್ಲ. ಅನೇಕ ಬಾರಿ ಪಕ್ಷದಲ್ಲಿನ ನಾಯಕರು ಭಾಷಣ ಮಾಡುವಾಗ ಜಾತಿ, ಹಣ ಯಾವುದೂ ಬೇಕಾಗಿಲ್ಲ ಎಂದಿದ್ದರು. ಇದನ್ನು ನಂಬಿ ನಾನು ಪಕ್ಷದಲ್ಲಿ ಸೇವೆ ಸಲ್ಲಿಸಿದ್ದೆ. ಆದರೆ ಈಗ ಪುರಸಭೆಯ ಟಿಕೆಟ್ ಕೇಳಿದರೆ
ಜಾತಿ ಉಂಟೇ, ಹಣ ಉಂಟೇ ಎಂದುಪ್ರಶ್ನಿಸುತ್ತಾರೆ.

ನನ್ನಲ್ಲಿ ಜಾತಿ, ಹಣ ಯಾವುದೂ ಇಲ್ಲ. ಅದಕ್ಕಾಗಿ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಕೂತು ಮಾತನಾಡಿಸಲೂ ಇಲ್ಲ. ಆದರೆ ಇಂತಹ ಜಾತ್ಯತೀತೆಯ ಮಾತು ಗಳನ್ನು ನಂಬಿಕೊಂಡು ನನ್ನಂತಹ ಯುವಕರು ಹಾಳಾಗಬಾರದು’ ಎಂದು ದೃಶ್ಯದಲ್ಲಿ ಹೇಳಿಕೊಂಡಿದ್ದಾರೆ.


 

Video Top Stories