Asianet Suvarna News Asianet Suvarna News

RTO ಅಧಿಕಾರಿಗಳ ದಾಳಿ: ಅಕ್ರಮ ಓಡಾಡುತ್ತಿದ್ದ ಖಾಸಗಿ ಬಸ್‌ ಜಪ್ತಿ

ಒಂದೇ ನಂಬರ್‌ನಲ್ಲಿ ಸಾಕಷ್ಟು ಬಸ್‌ಗಳ ಓಡಾಟ|ಯಶವಂತಪುರ ಆರ್‌ಟಿಓ ಅಧಿಕಾರಿಗಳ‌ ಕಾರ್ಯಾಚರಣೆ| ಧನುಷ್ ಟ್ರಾವೆಲ್ಸ್‌ನ ಎರಡು ಬಸ್‌ ಜಪ್ತಿ| 

ಬೆಂಗಳೂರು(ಅ.19): ಅಕ್ರಮವಾಗಿ ಓಡಾಡುತ್ತಿದ್ದ ಖಾಸಗಿ ಬಸ್‌ಗಳನ್ನು ಆರ್‌ಟಿಓ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಇಂದು(ಸೋಮವಾರ) ನಗರದಲ್ಲಿ ನಡೆದಿದೆ. ಒಂದೇ ನಂಬರ್‌ನಲ್ಲಿ ಸಾಕಷ್ಟು ಬಸ್‌ಗಳು ಓಡಾಡುತ್ತಿದ್ದವು ಎಂಬುದರ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಹೀಗಾಗಿ ಯಶವಂತಪುರ ಆರ್‌ಟಿಓ ಅಧಿಕಾರಿಗಳ‌ ಕಾರ್ಯಾಚರಣೆ ನಡೆಸುವ ಮೂಲಕ ಖಾಸಗಿ ಬಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ. 

ಇನ್ನೂ 2 ದಿನ ರಾಜ್ಯದಲ್ಲಿ ಹೈ ಅಲರ್ಟ್; ಪ್ರವಾಹದಬ್ಬರಕ್ಕೆ ಜನ ಹೈರಾಣೋ ಹೈರಾಣು!

ಯಶವಂತಪುರ ಆರ್‌ಟಿಓ ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್, ಆರ್‌ಟಿಓ ಎಸ್ ಮಂಜುನಾಥ್ ಹಾಗೂ ಇನ್ಸ್‌ಪೆಕ್ಟರ್‌ಗಳಾದ ರಾಜಣ್ಣ, ಸುಧಾಕರ್ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ಧನುಷ್ ಟ್ರಾವೆಲ್ಸ್‌ನ ಎರಡು ಬಸ್‌ಗನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಅಕ್ರಮವಾಗಿ ರಿಜಿಸ್ಟರ್ ಆಗದಿರುವ ನಂಬರ್‌ ಇಟ್ಕೊಂಡು ಬಸ್ ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.
 

Video Top Stories