ಸ್ವಾಭಿಮಾನ ಅಂದ್ರೆ ಇದು, ಮೂಡಿಗೆರೆ ಗ್ರಾಮಸ್ಥರ ಸರ್ಕಾರಕ್ಕೆ ಸವಾಲ್ ಸ್ಟೋರಿ!
ಚಿಕ್ಕಮಗಳೂರು(ನ. 27) ರಸ್ತೆ ದುರಸ್ತಿಗೆ ಸರ್ಕಾರಕ್ಕೂ ಕಾಯಲಿಲ್ಲ, ಎಲ್ಲಾ ಇಲಾಖೆಗೂ ಮನವಿ ಸಲ್ಲಿಸಿ ಬೇಸತ್ತ ಗ್ರಾಮಸ್ಥರು , ಯಾವ ಇಲಾಖೆಯ ನೆರವಿಗೂ ಕೈ ಚಾಚದೇ, ಗ್ರಾಮದ ಜನರೇ ಒಂದಡೆ ಸೇರಿದರು. ಗ್ರಾಮದಲ್ಲೆ ತಲಾ ಇಂತಿಷ್ಟು ಅಂತ ದೇಣಿಗೆ ಎತ್ತಿದರು, ಹಾಳಾಗಿದ್ದ ರಸ್ತೆ ನೆಟ್ಟಗೆ ಮಾಡಿಕೊಂಡರು.ಹೌದು, ಇಂಥದ್ದೊಂದು ದುರಸ್ತಿ ಕಾರ್ಯ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬೆರಣಗೋಡು ಗ್ರಾಮಸ್ಥರು ಕೈಗೊಂಡು ಮಾದರಿಯಾಗಿದ್ದಾರೆ.
ಆಲ್ದೂರು ಕಿರಣ್

ಒಂದಡೆ ಗುಂಡಿಗಳದ್ದೇ ಕಾರುಬಾರು, ಇನ್ನೊಂದಡೆ ಕಿಲೋ ಮೀಟರ್ ಗಟ್ಟಲೇ ಗುಂಡಿ ರಸ್ತೆಗೆ ಗ್ರಾಮಸ್ಥರೇ ಶ್ರಮದಾನದ ಮೂಲಕ ಮಣ್ಣು ,ಕಲ್ಲು ಹಾಕುತ್ತಿರುವ ದ್ರಶ್ಯ ಹೌದು ಇದು ಚಿಕ್ಕಮಗಳೂರು ತಾಲ್ಲೂಕಿನ ಆವತಿ ಹೋಬಳಿಯ ಬೆರಣಗೋಡು ಮುಖ್ಯ ರಸ್ತೆ ಚಿತ್ರಣ. ಸ್ವಾತಂತ್ರ್ಯ ಬಂದ ದಿನದಿಂದಲೂ ಸರಿಯಾದ ರಸ್ತೆಯಲ್ಲಿ ಇಲ್ಲದೇ ಗ್ರಾಮಸ್ಥರು ನಿತ್ಯ ಗುಂಡಿ ಬಿದ್ದ ರಸ್ತೆಯಲ್ಲೇ ಧೂಳಿನ ನಶೆಯಲ್ಲಿ ಸಾಗುವಂತಹ ಪರಿಸ್ಥಿತಿ.
ಗ್ರಾಮವನ್ನು ಸಂಪರ್ಕಿಸುವ ಮುಖ್ಯರಸ್ತೆಯ 12ಕಿ.ಲೋ ಮೀಡರ್ ಉದ್ದಕ್ಕೂ ಗುಂಡಿ ಬಿದ್ದು ಹಾಳಾಗಿತ್ತು. ವಾಹನ ಸವಾರರು ಓಡಾಡುವುದೇ ಕಷ್ಟವಾಗಿತ್ತು. ಈ ಬಗ್ಗೆ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ಸಂಬಂಧಿಸಿದ ಇಲಾಖೆ ಇತ್ತ ಕಡೆ ಗಮನವೇ ಹರಿಸುತ್ತಿರಲಿಲ್ಲ.ಇದರಿಂದ ರೋಸಿ ಹೋದ ಗ್ರಾಮಸ್ಥರು ಕೊನೆಗೆ ಪ್ರತಿ ಮನೆಯಿಂದ ದೇಣಿಗೆ ಎತ್ತಿದರು. 80 ಮನೆಗಳಿಂದ ತಲಾ 500 ರೂ.ಗಳಿಂದ ಸಾವಿರದವರೆಗೆಹಣ ಸಂಗ್ರಹಿಸಿ ಬಾಡಿಗೆಯಾಗಿ ಜೆ.ಸಿ.ಬಿ. ತಂದರು. 12 ಕಿ.ಮೀ.ರಸ್ತೆ ಉದ್ದಕ್ಕೂ ಬಿದ್ದ ಗುಂಡಿಗಳಿಗೆ ಮಣ್ಣು , ಕಲ್ಲು ತುಂಬಿ ದುರಸ್ತಿ ಮಾಡಿದರು.
ಕಾಮಗಾರಿ ಕಾರ್ಯಕ್ಕೆ ಗ್ರಾಮಸ್ಥರೇ ಮುಂದಾದರು. 200 ಕ್ಕೂ ಹೆಚ್ಚು ಗ್ರಾಮದ ಯುವಕರು ರಸ್ತೆ ರಿಪೇರಿ ಕಾರ್ಯದಲ್ಲಿ ಮುಗ್ನರಾದರು. 2 ದಿನದ ಒಳಗೆ ರೀಪೇರಿ ಕಾರ್ಯವನ್ನು ಪೂರ್ಣಗೊಳಿಸಿದ ಯುವಕ ತಂಡ, ನಿತ್ಯ ಇದೇ ರಸ್ತೆಯಲ್ಲಿ ಸಂಚಾರಿಸುವ ಶಾಲೆ ಮಕ್ಕಳು, ಕೂಲಿ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಅನುಕೂಲ ಮಾಡಿಕೊಟ್ಟರು. ಉದ್ಯೋಗ ಖಾತರಿಯಂತಹ ಯೋಜನೆಗಳಿದ್ದರೂ ಇದನ್ನು ಬಳಸಿಕೊಳ್ಳದೆ ಸ್ವಾಭಿಮಾನಕ್ಕೆ ಬಿದ್ದ ಗ್ರಾಮದ ಜನ ರಸ್ತೆ ಸರಿ ಮಾಡಿಕೊಂಡು ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ಒಂದು ಸಂದೇಶ ರವಾನಿಸಿದರು.ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮದ ರಸ್ತೆಯನ್ನು ದುರಸ್ತಿ ಕುರಿತು ಶಾಸಕರ ಗಮನಕ್ಕೆ ತಂದರೂ ಪ್ರಯೋಜವಾಗಿರಲ್ಲ, ಕೊನೆಗೆ ಗ್ರಾಮಸ್ಥರೇ ಶ್ರಮದಾನ ಮೂಲಕ ರಸ್ತೆ ದುರಸ್ಥಿ ಪಡೆಸಿ ಎಚ್ಚರಿಕೆ ನೀಡಿದ್ದಾರೆ.