ಕಲ್ಬುರ್ಗಿ, ಯಾದಗಿರಿಗೆ ಭೇಟಿ ನೀಡಿ ಜನರ ಸಂಕಷ್ಟವನ್ನು ಆಲಿಸುತ್ತೇನೆ: ಆರ್ ಅಶೋಕ್

ಹವಾಮಾನ ಇಲಾಖೆ ಇನ್ನೂ 2 ದಿನ ಅಲರ್ಟ್ ಘೋಷಣೆ ಮಾಡಿದೆ. ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ನಾನು ಕೂಡಾ ಯಾದಗಿರಿ, ಕಲಬುರ್ಗಿ ಭಾಗಕ್ಕೆ ಭೇಟಿ ಕೊಡಲಿದ್ದೇನೆ. ಜನರ ಕಷ್ಟವನ್ನು ವಿಚಾರಿಸಲಿದ್ದೇನೆ ಎಂದು ಆರ್. ಅಶೋಕ್ ಹೇಳಿದ್ದಾರೆ. 

First Published Oct 15, 2020, 4:14 PM IST | Last Updated Oct 15, 2020, 4:18 PM IST

ಬೆಂಗಳೂರು (ಅ. 15): ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಲಬುರ್ಗಿ ತತ್ತರಿಸಿ ಹೋಗಿದೆ. ಎರಡು ದಶಕಗಳಲ್ಲಿ ಇದೇ ಮೊದಲು ಎನ್ನುವಂತೆ ಮಳೆ ಸುರಿದಿದೆ. ಸುಮಾರು 10 ತಾಸುಗಳ ತನಕ ಎಡೆಬಿಡದೇ ಸುರಿದ ಮಳೆಗೆ ಕಲ್ಬುರ್ಗಿ ಭಾಗಶಃ ಮುಳುಗಿದೆ. ಚಿತ್ತಾಪುರದ ಕಡಬೂರು ಗ್ರಾಮ ಸಂಪೂರ್ಣ ಜಲಾವೃತವಾಗಿದೆ.

ಈ ಬಾರಿ ಭಾರೀ ಚಳಿ, ಮೂರು ರಾಜ್ಯಗಳಿಗೆ ಅಪಾಯ!

ಹವಾಮಾನ ಇಲಾಖೆ ಇನ್ನೂ 2 ದಿನ ಅಲರ್ಟ್ ಘೋಷಣೆ ಮಾಡಿದೆ. ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ನಾನು ಕೂಡಾ ಯಾದಗಿರಿ, ಕಲಬುರ್ಗಿ ಭಾಗಕ್ಕೆ ಭೇಟಿ ಕೊಡಲಿದ್ದೇನೆ. ಜನರ ಕಷ್ಟವನ್ನು ವಿಚಾರಿಸಲಿದ್ದೇನೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.