ಹಾಲಿನ ದರ ಏರಿಕೆಗೆ ಮುಹೂರ್ತ ಫಿಕ್ಸ್: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

ಹಾಲಿನ ದರ ಏರಿಕೆಗೆ ಸರ್ಕಾರದಿಂದ ಮುಹೂರ್ತ ಫಿಕ್ಸ್ ಆಗಿದ್ದು, ನ. 21ರಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
 

First Published Nov 19, 2022, 11:49 AM IST | Last Updated Nov 19, 2022, 11:49 AM IST

ಸಿಎಂ ಬೊಮ್ಮಾಯಿಂದ ನೂತನ ಹಾಲಿನ ದರ ಘೋಷಣೆ ಮಾಡಿಸಲು KMF ಪ್ಲಾನ್ ಮಾಡಿದ್ದು, ಸೋಮವಾರ ಸಭೆ ನಡೆಯಲಿದೆ. ಹಾಲಿನ ದರ ಏರಿಕೆಗೆ ಸಿಎಂ ಬೊಮ್ಮಾಯಿಗೆ KMF ನಿಂದ ಒತ್ತಡವಿದ್ದು, ಸಭೆಯಲ್ಲಿ ದರ ಏರಿಕೆ ಅನಿವಾರ್ಯತೆ ಕುರಿತು ಸಿಎಂಗೆ ಮನವರಿಕೆ ಮಾಡಲಾಗುವುದು. ದರ ಏರಿಕೆ ಕುರಿತು ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟವಾಗಲಿದ್ದು, ಸಿಎಂ ಬೊಮ್ಮಾಯಿ, KMF ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತುಕತೆ ನಡೆಸಲಿದ್ದಾರೆ. ರೈತರು ಮತ್ತು ಸಂಸ್ಥೆ ಹಿತದೃಷ್ಟಿಯಿಂದ ದರ ಏರಿಕೆಗೆ ಒತ್ತಾಯಿಸಿದ್ದು, ಬಾಲಚಂದ್ರ ಜಾರಕಿಹೊಳಿ ಮನವಿಗೆ ಸಿಎಂ ಬೊಮ್ಮಾಯಿ ಸ್ಪಂದಿಸಿದ್ದಾರೆ. ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ ಏರಿಕೆ ಸಾಧ್ಯತೆ ಇದೆ.

International Mens Day: ಪುರುಷರಿಗಾಗಿ ಒಂದು ದಿನವೇಕೆ?