ಬಿಜೆಪಿ ನಾಯಕರಿಂದ ಇಫ್ತಾರ್, ಜೆಡಿಎಸ್ ಶಾಸಕರಿಂದ ಭರ್ಜರಿ ಬರ್ತಡೆ, ಲಾಕ್ ಡೌನ್ ಇವರಿಗಿಲ್ವ?
ಜನರಿಗೆ ನೀತಿ ಪಾಠಹೇಳಬೇಕಾದ ಶಾಸಕರಿಂದಲೇ ಸಾಮಾಜಿಕ ಅಂತರ ಉಲ್ಲಂಘನೆ/ ಭರ್ಜರಿ ಜನ್ಮದಿನ ಆಚರಣೆ ಮಾಡಿಕೊಂಡ ಜೆಡಿಎಸ್ ಶಾಸಕ/ ಬೆಳಗ್ಗೆ 8 ರಿಂದ ಮಧ್ಯಾಹ್ನದವರೆಗೆ ಬರ್ತಡೆ ಪಾರ್ಟಿ
ರಾಮನಗರ(ಮೇ 21) ಜನರಿಗೆಲ್ಲ ಲಾಕ್ ಡೌನ್ ಬಿಸಿಯಾಗಿದ್ದರೆ ಈ ಶಾಸಕರಿಗೆ ಜನ್ಮದಿನದ ಸಂಭ್ರಮ. ಬಿಜೆಪಿ ನಾಯಕರೊಬ್ಬರು ಇಪ್ತಾರ್ ಕೂಟ ಮಾಡಿದ್ದರೆ ಈ ಶಾಸಕರು ಬಿಂದಾಸ್ ಆಗಿ ಬರ್ತಡೆ ಮಾಡಿಕೊಂಡಿದ್ದಾರೆ.
ಸಾಮಾಜಿಕ ಅಂತರದ ಮಾತು ಕೇಳಲೇಬೇಡಿ. ಜೆಡಿಎಸ್ ಶಾಸಕ ಎ. ಮಂಜುನಾಥ್ ರಾಮನಗರದ ಬಿಡದಿಯಲ್ಲಿ ಭರ್ಜರಿ ಜನ್ಮದಿನ ಆಚರಣೆ ಮಾಡಿಕೊಂಡಿದ್ದಾರೆ. ಊರಿಗೆಲ್ಲ ಬುದ್ಧಿ ಹೇಳುವ ಜನನಾಯಕರೇ ಹೀಗೆ ಮಾಡಿದರೆ ಹೇಗೆ?