ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ: ರಾಯಚೂರಿನಲ್ಲಿ ಗ್ರಾಪಂ ಸದಸ್ಯರ ಪ್ರತಿಭಟನೆ

ರಾಯಚೂರು ಜಿಲ್ಲಾ ಪಂಚಾಯತ್'ನಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ‌ಮಾಡಲಾಗಿದೆ ಎಂದು ಆರೋಪಿಸಿ, ಪ್ರತಿಭಟನೆ ಮಾಡಲಾಗಿದೆ.

First Published Nov 7, 2022, 5:05 PM IST | Last Updated Nov 7, 2022, 5:05 PM IST

ರಾಯಚೂರು ನಗರದ ವಾಲ್ಮೀಕಿ ವೃತ್ತದಿಂದ ಜಿ.ಪಂ ಕಚೇರಿವರೆಗೆ ಗ್ರಾಮ ಪಂಚಾಯತ್ ಸದಸ್ಯರು ಪಾದಯಾತ್ರೆ ಮೂಲಕ ಪ್ರತಿಭಟನೆ ಮಾಡಿದ್ದಾರೆ. ಸಿಂಧನೂರು ತಾಲೂಕಿನ 30 ಗ್ರಾಪಂ ಸದಸ್ಯರು, ಅನುದಾನ ತಾರತಮ್ಯ ಕೈಬಿಡುವಂತೆ ಆಗ್ರಹಿಸಿ ಜಿ.ಪಂ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಗ್ರಾಪಂ.ಗಳ ಅಭಿವೃದ್ಧಿ ಕೆಲಸಕ್ಕೆ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಸಮಾನ ಅನುದಾನ ಹಂಚಿಕೆ ‌ಮಾಡಲು ಆಗ್ರಹಿಸಿದ್ದಾರೆ. ಅನುದಾನ ನೀಡಿ ಇಲ್ಲ ನಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ಸುಮಾರು 3 ಗಂಟೆಗಳ ಕಾಲ ಜಿ.ಪಂ. ಎದುರು ಕುಳಿತು ಪ್ರತಿಭಟನೆ ಮಾಡಲಾಗಿದೆ.