Asianet Suvarna News Asianet Suvarna News

ಶಾಸಕ ಭೀಮಾನಾಯ್ಕ್ ವರ್ತನೆಗೆ ಖಂಡನೆ: ಹಗರಿಬೊಮ್ಮನಹಳ್ಳಿ ಬಂದ್

ಬಿಜೆಪಿ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ| ಬಳ್ಳಾರಿ ಜಿಲ್ಲೆಯಲ್ಲಿರುವ ಹಗರಿಬೊಮ್ಮನಹಳ್ಳಿ ಪಟ್ಟಣ| ಪುರಸಭೆ ಚುನಾವಣೆ ವೇಳೆ ತೊಡೆ ತಟ್ಟಿ ಜಗಳಕ್ಕೆ ಮುಂದಾಗಿದ್ದ ಶಾಸಕ ಭೀಮಾನಾಯ್ಕ್| 

Nov 11, 2020, 3:46 PM IST

ಬಳ್ಳಾರಿ(ನ.11): ಶಾಸಕ ಭೀಮಾನಾಯ್ಕ್ ಅವರ ವರ್ತನೆ ಖಂಡಿಸಿ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣ ಬಂದ್‌ಗೆ ಕರೆ ನೀಡಲಾಗಿದೆ. ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆದಿದ್ದಾರೆ. ಪುರಸಭೆ ಚುನಾವಣೆ ವೇಳೆ ಶಾಸಕ ಭೀಮಾನಾಯ್ಕ್ ತೊಡೆ ತಟ್ಟಿ ಜಗಳಕ್ಕೆ ಮುಂದಾಗಿದ್ದರು.

ಬಸನಗೌಡ ಪಾಟೀಲ್ ಯತ್ನಾಳ್ AK 47 ಇದ್ದಂತೆ: ಹಾಡಿ ಹೊಗಳಿದ ಸಚಿವ..!

ಹೀಗಾಗಿ ಶಾಸಕರ ವರ್ತನೆಯನ್ನ ಖಂಡಿಸಿ ಬಿಜೆಪಿ ಕಾರ್ಯಕರ್ತರು ಭೀಮಾನಾಯ್ಕ್ ಪ್ರತಿಕೃತಿ ಧಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೇದಿಕೆ ಮೇಲೆ ಭೀಮಾನಾಯ್ಕ್‌ ಫೋಟೋಗೆ ಮಸಿ ಬಳಿ ಬಳಿದು ಆಕ್ರೋಶವನ್ನ ಹೊರಹಾಕಿದ್ದಾರೆ.