'ಅಕೇಶಿಯ ಪ್ಲಾಂಟೇಷನ್ ನಮ್ಮೂರಿಗೆ ಬೇಡ' ಶಿವಮೊಗ್ಗದಲ್ಲಿ ಪ್ರತಿಭಟನೆ
ಭದ್ರಾವತಿ ಎಂಪಿಎಂ ಕಾರ್ಖಾನೆಗೆ ಲೀಸ್ ನೀಡಿದ್ದ ಅರಣ್ಯ ಭೂಮಿಯನ್ನು ಸರ್ಕಾರ ಕೂಡಲೇ ಹಿಂಪಡೆದು ಅರಣ್ಯ ಇಲಾಖೆಗೆ ನೀಡಬೇಕೆಂದು ಒತ್ತಾಯಿಸಿ ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ ಸೇರಿದಂತೆ ಹಲವಾರು ಪರಿಸರ ಸಂಘಟನೆಗಳ ವತಿಯಿಂದ ಅರಣ್ಯ ಇಲಾಖೆ ಸಿಸಿಎಫ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಶಿವಮೊಗ್ಗ (ಜ. 08): ಭದ್ರಾವತಿ ಎಂಪಿಎಂ ಕಾರ್ಖಾನೆಗೆ ಲೀಸ್ ನೀಡಿದ್ದ ಅರಣ್ಯ ಭೂಮಿಯನ್ನು ಸರ್ಕಾರ ಕೂಡಲೇ ಹಿಂಪಡೆದು ಅರಣ್ಯ ಇಲಾಖೆಗೆ ನೀಡಬೇಕೆಂದು ಒತ್ತಾಯಿಸಿ ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ ಸೇರಿದಂತೆ ಹಲವಾರು ಪರಿಸರ ಸಂಘಟನೆಗಳ ವತಿಯಿಂದ ಅರಣ್ಯ ಇಲಾಖೆ ಸಿಸಿಎಫ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಬಚ್ಚಲು ಮನೆಯಲ್ಲಿ ಅವಿತುಕೊಂಡಿತ್ತು ಕಾಳಿಂಗ ಸರ್ಪ, ಸುರಕ್ಷಿತವಾಗಿ ಅರಣ್ಯ ಸೇರ್ಕೊಂಡ್ತಪ್ಪಾ..!
ನಿತ್ಯಹರಿದ್ವರ್ಣ ಸಸ್ಯರಾಶಿ ಹೊಂದಿದ ಪಶ್ಚಿಮಘಟ್ಟಪ್ರದೇಶ ನಾಡಿನ ಜೀವನಾಡಿಯಾದ ನದಿಗಳ ಉಗಮಸ್ಥಾನವಾಗಿದೆ. ಮಲೆನಾಡಿನ ಅರಣ್ಯ ಪ್ರದೇಶ ಜೀವ ವೈವಿದ್ಯಮಯದ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿನ ಪರಿಸರದಲ್ಲಿ ಸ್ವಲ್ಪ ಏರುಪೇರು ಸಂಭವಿಸಿದರೆ ವನ್ಯಜೀವಿಗಳ ಮೇಲೆ ಮಾತ್ರವಲ್ಲ, ಮಾನವ ಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.