ಬಾದಾಮಿ: CAA ಬೆಂಬಲಿಸಿ ಹಿಂದೂ ಪರ ಸಂಘಟನೆಗಳಿಂದ ಬೃಹತ್ ಮೆರವಣಿಗೆ
ಸಿಎಎ ಬೆಂಬಲಿಸಿ ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಮೆರವಣಿಗೆ| ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ನಡೆದ ಮೆರವಣಿಗೆ| ಮೆರವಣಿಗೆಯಲ್ಲಿ ಗಮನ ಸೆಳೆದ 200 ಮೀಟರ್ ತಿರಂಗ ಧ್ವಜ| ಜಾಗೃತಿ ಫಲಕ ಹಿಡಿದು ಸಿಎಎ ಪರ ಘೋಷಣೆ|
ಬಾಗಲಕೋಟೆ(ಜ.19): ಸಿಎಎ ಬೆಂಬಲಿಸಿ ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ಇಂದು(ಭಾನುವಾರ) ಬೃಹತ್ ಜನಜಾಗೃತಿ ಅಭಿಯಾನ ನಡೆದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಯಲ್ಲಿ ಸಿಎಎ ಬೆಂಬಲಿಸಿ ಬೃಹತ್ ಜಾಗೃತಿ ಮೆರವಣಿಗೆ ನಡೆದಿದೆ. ಮೆರವಣಿಗೆಯಲ್ಲಿ 200 ಮೀಟರ್ ತಿರಂಗ ಧ್ವಜ ಗಮನ ಸೆಳೆದಿದೆ.
ಪೌರತ್ವ ಕಾಯ್ದೆ ವಿರೋಧಿಸಿ ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆ
ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಿಂದ ಬಸವೇಶ್ವರ ಸರ್ಕಲ್‌ವರೆಗೆ ನಡೆದ ಮೆರವಣಿಗೆಯಲ್ಲಿ ಜಾಗೃತಿ ಫಲಕ ಹಿಡಿದು ಸಿಎಎ ಪರ, ಘೋಷಣೆಗಳನ್ನ ಕೂಗಲಾಗಿದೆ. ಮೆರವಣಿಗೆಯಲ್ಲಿ ನವಗ್ರಹ ಮಠದ ಶ್ರೀ ಶಿವಪೂಜಿ ಸ್ವಾಮೀಜಿ, ಬಿಜೆಪಿ ತಾಲೂಕು ಅಧ್ಯಕ್ಷ ಎಸ್ ಟಿ ಪಾಟೀಲ್, ಸೇರಿದಂತೆ ನೂರಾರು ಯುವಕರು ಭಾಗಿಯಾಗಿದ್ದಾರೆ.