Asianet Suvarna News Asianet Suvarna News

ಕೊರೋನಾದಿಂದ ಜನ ತತ್ತರಿಸುತ್ತಿದ್ರೂ ಇವರಿಗೆ ರಿವಿಷನ್ ಚಿಂತೆ: ಮಂಡ್ಯದ ಖಾಸಗಿ ಶಾಲೆಗಳಲ್ಲಿ ಪಾಠ

ಶಾಲೆ ತೆರೆಯಬೇಡಿ ಎಂದು ಸರ್ಕಾರ ಸೂಚನೆ ನೀಡುತ್ತಿದ್ದರೂ, ಮಂಡ್ಯದಲ್ಲಿ ಮಾತ್ರ ಮಕ್ಕಳಿಗೆ ತರಗತಿಗಳನ್ನು ನಡೆಸಲಾಗುತ್ತಿದೆ. ಸರ್ಕಾರವೇ ಶೈಕ್ಷಣಿಕ ವರ್ಷ ಮುಂದೂಡಿದ್ದರೂ, ಶಾಲೆಗಳು ಮಾತ್ರ ಡೋಂಟ್ ಕೇರ್ ಎನ್ನುತ್ತಿವೆ. ಇಲ್ಲಿದೆ ವಿಡಿಯೋ

ಮಂಡ್ಯ(ಜೂ.16): ಶಾಲೆ ತೆರೆಯಬೇಡಿ ಎಂದು ಸರ್ಕಾರ ಸೂಚನೆ ನೀಡುತ್ತಿದ್ದರೂ, ಮಂಡ್ಯದಲ್ಲಿ ಮಾತ್ರ ಮಕ್ಕಳಿಗೆ ತರಗತಿಗಳನ್ನು ನಡೆಸಲಾಗುತ್ತಿದೆ. ಸರ್ಕಾರವೇ ಶೈಕ್ಷಣಿಕ ವರ್ಷ ಮುಂದೂಡಿದ್ದರೂ, ಶಾಲೆಗಳು ಮಾತ್ರ ಡೋಂಟ್ ಕೇರ್ ಎನ್ನುತ್ತಿವೆ.

ಕೊರೋನಾ ಸಾವಿನ ಸಂಖ್ಯೆ: ಭಾರತವೀಗ ವಿಶ್ವ ನಂ.8!

ಮಂಡ್ಯ ಜಿಲ್ಲೆಯಲ್ಲಿ ಬಹುತೇಕ ಖಾಸಗಿ ಶಾಲೆಗಳು ತೆರೆದಿದ್ದು, 10ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಾಗುತ್ತಿದೆ. ಆದರ್ಶ ಪ್ರೌಢ ಶಾಲೆ ಸೇರಿದಂತೆ ಹಲವು ಕಡೆ ಪಾಠ ಮಾಡಲಾಗುತ್ತಿದೆ. ಶಾಲೆ ತರೆಯಲು ಸರ್ಕಾರ ಅನುಮತಿ ನೀಡದಿದ್ದರೂ ಪೋಷಕರ ಒತ್ತಾಯದ ಮೇರೆಗೆ ತರಗತಿ ನಡೆಸಲಾಗುತ್ತಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.

Video Top Stories