Bengaluru ಖಾಸಗಿ ಶಾಲೆಗಳ ಮುಂದುವರಿದ ಅಟ್ಟಹಾಸ: 2,500 ರೂ. ಶುಲ್ಕಕ್ಕೆ ವಿದ್ಯಾರ್ಥಿ ಹೊರಗಟ್ಟಿದ ಶಾಲೆ
ಕೇವಲ 2,500 ರೂ. ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿಯನ್ನು ಶಾಲೆ ಹೊರಗಟ್ಟಿದೆ. ಹಾಗೆ, ಇದನ್ನೆ ಪ್ರಶ್ನಿಸಲು ಹೋದ ಪೋಷಕರಿಗೆ ಆವಾಜ್ ಹಾಕಿದ್ದು, ಜತೆಗೆ ವರದಿ ಮಾಡಲು ಹೋದ ಮಾಧ್ಯಮದವರ ಮೇಲೂ ಶಾಲಾ ಸಿಬ್ಬಂದಿ ಗಲಾಟೆ ಮಾಡಿದ್ದಾರೆ.
ರಾಜಧಾನಿ ಬೆಂಗಳೂರಲ್ಲಿ ಖಾಸಗಿ ಶಾಲೆಗಳ ಅಟ್ಟಹಾಸ ಇನ್ನೂ ನಿಲ್ಲುತ್ತಿಲ್ಲ. ದುಡ್ಡು ದುಡ್ಡು ಎಂದು ಖಾಸಗಿ ಶಾಲೆಗಳು ಪೋಷಕರು ರಕ್ತಹೀರುತ್ತಿವೆ. ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿಯನ್ನು ಹೊರಗೆ ಕಳಿಸಿ ದರ್ಪ ಮೆರೆದಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ಕೇವಲ 2,500 ರೂ. ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿಯನ್ನು ಶಾಲೆ ಹೊರಗಟ್ಟಿದೆ. ಹಾಗೆ, ಇದನ್ನೆ ಪ್ರಶ್ನಿಸಲು ಹೋದ ಪೋಷಕರಿಗೆ ಆವಾಜ್ ಹಾಕಿದ್ದು, ಜತೆಗೆ ವರದಿ ಮಾಡಲು ಹೋದ ಮಾಧ್ಯಮದವರ ಮೇಲೂ ಶಾಲಾ ಸಿಬ್ಬಂದಿ ಗಲಾಟೆ ಮಾಡಿದ್ದಾರೆ.