Asianet Suvarna News Asianet Suvarna News

ಮಂಗಳವಾರ ಸಂಜೆ ಅಬ್ಬರಿಸಿದ ವರುಣ, ಇನ್ನು ಮೂರ್ನಾಲ್ಕು ದಿನ ಎಲ್ಲೆಲ್ಲಿ ಮಳೆ?

ಬೆಂಗಳೂರು[ಏ. 30]   ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಂಗಳವಾರ ಸಂಜೆ ಮಳೆಯಾಗಿದೆ. ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದ್ದು  ಸೈಕ್ಲೋನ್ ಫನಿ ಎಫೆಕ್ಟ್ ‌ಕಾರಣ ಎಂದು ಹೇಳಲಾಗಿದೆ. ಮುಂಗಾರು ಪೂರ್ವ ಮಳೆ ಪರಿಣಾಮ ಬೆಂಗಳೂರು ಮಳೆ ಪಡೆದಿದೆ. ಬೆಂಗಳೂರು ವಾರದಲ್ಲಿ ಎರಡು ಮಳೆ ಪಡೆದಂತೆ ಆಗಿದೆ. ಮೆಜೆಸ್ಟಿಕ್, ಯಶವಂತಪುರ, ಮಲ್ಲೇಶ್ವರ,  ರಾಜಾಜಿನಗರ, ಕಾರ್ಪೊರೇಷನ್ ಸೇರಿ ಬೆಂಗಳೂರಿನಾದ್ಯಂತೆ ಭಾರೀ ಮಳೆಯಾಗಿದೆ.  ಬೆಂಗಳೂರು ಸೇರಿದಂತೆ ರಾಜ್ಯ ಮಲೆನಾಡು, ಕರಾವಳಿ ಭಾಗದಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆಯಾಗುವ ಸಂಭವವಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ರಾಜ್ಯದಲ್ಲಿ ಮೋಡಗಳ ಸಾಲು ನಿರ್ಮಾಣವಾಗಿದ್ದು ಮಳೆ ಬೀಳಲು ಕಾರಣವಾಗುತ್ತಿದೆ ಎಂದು  ಸುವರ್ಣ ನ್ಯೂಸ್ ಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.