ಯಾದಗಿರಿ: ಕ್ವಾರಂಟೈನ್‌ ಕೇಂದ್ರದಲ್ಲಿ ಕಾರ್ಮಿಕರಿಗೆ ನರಕ ದರ್ಶನ, ಆಹಾರದಲ್ಲಿ ಹುಳು..!

ಕ್ವಾರಂಟೈನ್‌ ಕೇಂದ್ರದಲ್ಲಿ ಕಾರ್ಮಿಕರಿಗೆ ನರಕ ದರ್ಶನ| ಯಾದಗಿರಿ ಜಿಲ್ಲೆಯ ಬಂದಳ್ಳಿ ಗ್ರಾಮದಲ್ಲಿರುವ ಕ್ವಾರಂಟೈನ್‌ ಕೇಂದ್ರದಲ್ಲಿ ನಡೆದ ಘಟನೆ| ಸ್ನಾನಕ್ಕೆ ಬಕೆಟ್‌ ಇಲ್ಲದೆ ಕಳೆದ 26 ದಿನಗಳಿಂದ ಕೂಲಿ ಕಾರ್ಮಿಕರ ಪರದಾಟ|

First Published Jun 6, 2020, 10:59 AM IST | Last Updated Jun 6, 2020, 10:59 AM IST

ಯಾದಗಿರಿ(ಜೂ.06): ಕ್ವಾರಂಟೈನ್‌ ಕೇಂದ್ರದಲ್ಲಿ ನೀಡಿದ ಆಹಾರದಲ್ಲಿ ಹುಳುಗಳು ಪತ್ತೆಯಾದ ಘಟನೆ ಜಿಲ್ಲೆಯ ಬಂದಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಮೂಲಕ ಕ್ವಾರಂಟೈನ್‌ ಕೇಂದ್ರದಲ್ಲಿ ಕಾರ್ಮಿಕರಿಗೆ ನರಕ ದರ್ಶನವಾಗುತ್ತಿದೆ. ಈ ಕ್ವಾರಂಟೈನ್‌ ಕೇಂದ್ರದಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ.

ಹೆಚ್ಚಾಗುತ್ತಿದೆ ಆತಂಕ: ರಾಜ್ಯದ ಶೇ. 98 ರಷ್ಟು ಸೋಂಕಿತರಿಗೆ ಲಕ್ಷಣವೇ ಕಾಣಿಸುತ್ತಿಲ್ಲ!

ಸ್ನಾನಕ್ಕೆ ಬಕೆಟ್‌ ಇಲ್ಲದೆ ಕಳೆದ 26 ದಿನಗಳಿಂದ ಕೂಲಿ ಕಾರ್ಮಿಕರು ಪರದಾಟ ನಡೆಸುತ್ತಿದ್ದಾರೆ. ಇದರಿಂದ ಕ್ವಾರಂಟೈನ್‌ ಕೇಂದ್ರದಲ್ಲಿರುವ ಕಾರ್ಮಿಕರು ಬಹಳಷ್ಟು ತೊಂದರೆಗಳನ್ನ ಅನುಭವಿಸುತ್ತಿದ್ದಾರೆ.