Asianet Suvarna News Asianet Suvarna News

ಗರ್ಭಿಣಿ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲೇ ಸೀಮಂತ, ಸಹೋದ್ಯೋಗಿಗಳ ಸಂಭ್ರಮ ಹೀಗಿತ್ತು

Feb 5, 2021, 5:18 PM IST
  • facebook-logo
  • twitter-logo
  • whatsapp-logo

ಚಿಕ್ಕಮಗಳೂರು  (ಫೆ. 05): ತುಂಬು ಗರ್ಭಿಣಿಯಾಗಿದ್ದ ಮಹಿಳಾ ಠಾಣೆ ಎಸ್.ಐ. ಹಾಗೂ ಮತ್ತಿಬ್ಬರು ಮಹಿಳಾ ಪೇದೆಗಳಿಗೆ ಠಾಣೆಯ ಸಿಬ್ಬಂದಿಗಳೇ ಸೀಮಂತ ಮಾಡಿ ಸಹೋದ್ಯೋಗಿಗಳ ಸಂತೋಷದ ಸಮಯವನ್ನ ಕುಟುಂಬಸ್ಥರಂತೆ ಸಂಭ್ರಮಿಸಿರೋ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. 

30 ವರ್ಷಗಳ ನಂತರ ಮತ್ತೆ ಮಹಾಲಕ್ಷ್ಮೀ ಪ್ರತ್ಯಕ್ಷ; ಹೇಗಿದಾರೆ?

ನಗರದ ತಾಲೂಕು ಕಚೇರಿ ಆವರಣದಲ್ಲಿರೋ ಮಹಿಳಾ ಠಾಣೆಯ ಎಸ್.ಐ.ನೇತ್ರಾವತಿ ಹಾಗೂ ಮಹಿಳಾ ಪೇದೆಗಳಾದ ರಾಜೇಶ್ವರಿ ಹಾಗೂ ವೇದಾ ಎಂಬುವರು ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದರು. ಇದೀಗ, ಮೂವರು ಡೆಲವರಿಗೆ ಹೋಗುವ ಮುನ್ನ ಠಾಣೆಯ ಸಿಬ್ಬಂದಿಗಳೆಲ್ಲಾ ಸೇರಿ ಮೂವರಿಗೂ ಠಾಣೆಯಲ್ಲಿ ಸೀಮಂತ ಮಾಡಿ ಖುಷಿ ಪಟ್ಟಿದ್ದಾರೆ.