ಬೆಂಗಳೂರಿನಲ್ಲೂ 'ಪೌರತ್ವ'ದ ಕಿಚ್ಚು: ರಾಮಚಂದ್ರ ಗುಹಾ ಸೇರಿದಂತೆ ಹಲವರ ಬಂಧನ

ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಇದೀಗ ಇಡೀ ದೇಶ ಒಂದಾಗಿದೆ. ಆರಂಭದಲ್ಲಿ ದೆಹಲಿ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಕ್ಕೆ ಮಾತ್ರ ಸೀಮಿತವಾಗಿದ್ದ ಹೋರಾಟದ ಕಿಚ್ಚು ಪ್ರಸ್ತುತ ದಕ್ಷಿಣ ಭಾರತಕ್ಕೂ ವ್ಯಾಪಿಸಿದೆ. ಬೆಂಗಳೂರಿನ ಟೌನ್‌ಹಾಲ್‌, ಮೈಸೂರು ಬ್ಯಾಂಕ್‌ ಸರ್ಕಲ್‌ ಬಳಿ ನೂರಾರು ಜನ ಪ್ರಗತಿಪರ ಹೋರಾಟಗಾರರು ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.  ಟೌನ್​ಹಾಲ್ ಬಳಿ ಪ್ರತಿಭಟಿಸುತ್ತಿದ್ದ ರಾಮಚಂದ್ರ ಗುಹಾ ಸೇರಿದಂತೆ ಎಲ್ಲಾ ಪ್ರತಿಭಟನಾಕಾರರನ್ನು ಪೊಲೀಸರು ಸೆಕ್ಷನ್​ 144 ಜಾರಿಯಿರುವ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ.

First Published Dec 19, 2019, 3:54 PM IST | Last Updated Dec 19, 2019, 3:54 PM IST

ಬೆಂಗಳೂರು (ಡಿಸೆಂಬರ್ 19); ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಇದೀಗ ಇಡೀ ದೇಶ ಒಂದಾಗಿದೆ. ಆರಂಭದಲ್ಲಿ ದೆಹಲಿ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಕ್ಕೆ ಮಾತ್ರ ಸೀಮಿತವಾಗಿದ್ದ ಹೋರಾಟದ ಕಿಚ್ಚು ಪ್ರಸ್ತುತ ದಕ್ಷಿಣ ಭಾರತಕ್ಕೂ ವ್ಯಾಪಿಸಿದೆ.

ಬೆಂಗಳೂರಿನ ಟೌನ್‌ಹಾಲ್‌, ಮೈಸೂರು ಬ್ಯಾಂಕ್‌ ಸರ್ಕಲ್‌ ಬಳಿ ನೂರಾರು ಜನ ಪ್ರಗತಿಪರ ಹೋರಾಟಗಾರರು ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.  ಟೌನ್​ಹಾಲ್ ಬಳಿ ಪ್ರತಿಭಟಿಸುತ್ತಿದ್ದ ರಾಮಚಂದ್ರ ಗುಹಾ ಸೇರಿದಂತೆ ಎಲ್ಲಾ ಪ್ರತಿಭಟನಾಕಾರರನ್ನು ಪೊಲೀಸರು ಸೆಕ್ಷನ್​ 144 ಜಾರಿಯಿರುವ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ.