ಹೆಡ್ ಕಾನ್ಸ್‌ಟೇಬಲ್ ತಿಪ್ಪಣ್ಣ ಸಾವು ಪ್ರಕರಣಕ್ಕೆ ಟ್ವಿಸ್ಟ್‌ ಕೊಟ್ಟ ಪತ್ನಿ!

ಹೆಡ್ ಕಾನ್ಸ್ಟೇಬಲ್ ತಿಪ್ಪಣ್ಣ ಆತ್ಮಹತ್ಯೆ ಪ್ರಕರಣದಲ್ಲಿ ಪತ್ನಿ ಪಾರ್ವತಿ ನೀಡಿರುವ ಹೇಳಿಕೆ ಹೊಸ ತಿರುವು ನೀಡಿದೆ. ತಿಪ್ಪಣ್ಣನಿಗೆ ಬೇರೊಂದು ಸಂಬಂಧವಿತ್ತು ಎಂದು ಪತ್ನಿ ಹೇಳಿದ್ದು, ಇದೇ ವಿಚಾರಕ್ಕೆ ಗಲಾಟೆ, ರಾಜಿ ಪಂಚಾಯ್ತಿ ಕೂಡ ನಡೆದಿತ್ತು ಎಂದು ತಿಳಿಸಿದ್ದಾರೆ.

First Published Dec 19, 2024, 3:59 PM IST | Last Updated Dec 19, 2024, 4:00 PM IST

ಬೆಂಗಳೂರು (ಡಿ.19): ಹೆಡ್ ಕಾನ್ಸ್ಟೇಬಲ್ ತಿಪ್ಪಣ್ಣ ಆತ್ಮಹತ್ಯೆ ಪ್ರಕರಣದಲ್ಲಿ ಆತನ ಪತ್ನಿ ನೀಡಿರುವ ಹೇಳಿಕೆ ಹೊಸ ಟ್ವಿಸ್ಟ್‌ ನೀಡಿದೆ. ತಿಪ್ಪಣ್ಣ ಪತ್ನಿ ಪಾರ್ವತಿ ಸ್ಟೇಟ್‌ಮೆಂಟ್‌ಅನ್ನು ಬೈಯಪ್ಪನ ಹಳ್ಳಿ ರೈಲ್ವೆ ಪೊಲೀಸರು ದಾಖಲಿಸಿದ್ದಾರೆ. 

ಪತಿಯ ಬೇರೊಂದು ಸಂಬಂಧದ ಬಗ್ಗೆ ಪತ್ನಿ ಮಾಹಿತಿ ನೀಡಿದ್ದಾರೆ. ತಿಪ್ಪಣ್ಣ ಗೆ ಮತ್ತೊಂದು ಸಂಬಂಧ ಇತ್ತು. ಇದೆ ವಿಚಾರಕ್ಕೆ ಗಲಾಟೆಯಾಗಿತ್ತು ಒಮ್ಮೆ ಆಕೆ ಕರೆ ಮಾಡಿ ತಿಪ್ಪಣ್ಣ ಸಂಬಂಧದ ಬಗ್ಗೆ ಹೇಳಿದ್ದಳು. ಇದೇ ವಿಚಾರಕ್ಕೆ ಹಲವು ಬಾರಿ ರಾಜಿ ಪಂಚಾಯ್ತಿ ಕೂಡ ಆಗಿತ್ತು ಎಂದು ಪತ್ನಿ ಹೇಳಿದ್ದಾಳೆ. ಜೊತೆಗೆ ತಿಪ್ಪಣ್ಣ ಬೇರೊಂದು ಯುವತಿಯ ಜೊತೆ ಸಲುಗೆಯಿಂದ ಇರುವ ಪೋಟೋ ಕೂಡ ಪತ್ನಿ ಕೊಟ್ಟೊದ್ದಾಳೆ. 

Balagam Mogulaiah: ಜಾನಪದ ಕಲಾವಿದ 'ಬಳಗಂ ಮೊಗಿಲಯ್ಯ' ನಿಧನ

ಹುಳಿಮಾವು ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆಗಿದ್ದ ತಿಪ್ಪಣ್ಣ, ಮಾವ , ಪತ್ನಿ ಹಾಗೂ ಬಾಮೈದನ ವಿರುದ್ಧ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ತಿಪ್ಪಣ್ಣ ಮಾವನ ಹೇಳಿಕೆಯನ್ನು  ರೈಲ್ವೆ ಪೊಲೀಸರು ದಾಖಲಿಸಿದ್ದಾರೆ. ಮಗಳೊಂದಿಗೆ ಸಂಸಾರ ಮಾಡು ಅಂತ ಹೇಳಿದ್ದೆ ಅಷ್ಟೇ ಎಂದು ಮಾವ ತಿಳಿಸಿದ್ದರೆ. ಹೇಳಿಕೆ ದಾಖಲಿಸಿ ರೈಲ್ವೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
 

Video Top Stories