Asianet Suvarna News Asianet Suvarna News

ನಾಯಿ ಮರಿಗಳಿಗೆ ಹಾಲುಣಿಸಿದ ಹಂದಿ: ವಿಡಿಯೋ ವೈರಲ್

ಸಂಬಂಧಗಳಿಗೆ ಬೆಲೆಯೇ ಇಲ್ಲದ ಈ ಕಾಲದಲ್ಲಿ ದಿನಬೆಳಗಾದ್ರೆ ಸಾಕು ಒಡಹುಟ್ಟಿದವರು ಕೂಡಾ ಶತ್ರುಗಳಾಗಿ ಬಿಡುತ್ತಾರೆ. ಇವುಗಳ ನಡುವೆ ತಾಯಿ ಪ್ರೀತಿ, ಹೃದಯ ವೈಶಾಲ್ಯತೆ ಅಂದರೇನು ಅಂತಾ ತೋರಿಸ್ತಿದೆ ಇಲ್ಲೊಂದು ಹಂದಿ. ಹೌದು, ತಾಯಿ ಕಳೆದುಕೊಂಡು ತಬ್ಬಲಿಗಳಾಗಿದ್ದಂತಹ ಮೂರು ನಾಯಿಮರಿಗಳಿಗೆ ಹಂದಿಯೊಂದು ನಿತ್ಯವೂ ಹಾಲುಣಿಸುವ ದೃಶ್ಯ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ‌ ನಗರದ ನವಗ್ರಾಮ-ಗಾವಟಾನದಲ್ಲಿ ಕಾಣಬಹುದಾಗಿದೆ.

First Published Jul 31, 2021, 7:18 PM IST | Last Updated Jul 31, 2021, 8:04 PM IST

ಸಂಬಂಧಗಳಿಗೆ ಬೆಲೆಯೇ ಇಲ್ಲದ ಈ ಕಾಲದಲ್ಲಿ ದಿನಬೆಳಗಾದ್ರೆ ಸಾಕು ಒಡಹುಟ್ಟಿದವರು ಕೂಡಾ ಶತ್ರುಗಳಾಗಿ ಬಿಡುತ್ತಾರೆ. ಇವುಗಳ ನಡುವೆ ತಾಯಿ ಪ್ರೀತಿ, ಹೃದಯ ವೈಶಾಲ್ಯತೆ ಅಂದರೇನು ಅಂತಾ ತೋರಿಸ್ತಿದೆ ಇಲ್ಲೊಂದು ಹಂದಿ. ಹೌದು, ತಾಯಿ ಕಳೆದುಕೊಂಡು ತಬ್ಬಲಿಗಳಾಗಿದ್ದಂತಹ ಮೂರು ನಾಯಿಮರಿಗಳಿಗೆ ಹಂದಿಯೊಂದು ನಿತ್ಯವೂ ಹಾಲುಣಿಸುವ ದೃಶ್ಯ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ‌ ನಗರದ ನವಗ್ರಾಮ-ಗಾವಟಾನದಲ್ಲಿ ಕಾಣಬಹುದಾಗಿದೆ.

ನವಗ್ರಾಮದಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ್ದ ಬೀದಿ ನಾಯಿಯೊಂದು ಕೆಲವೇ ದಿನಗಳಲ್ಲಿ ವಾಹನದಡಿ‌ ಸಿಲುಕಿ ಮೃತಪಟ್ಟಿತ್ತು. ಇದರಿಂದ ನಾಯಿಯ ಮೂರು ಮರಿಗಳು ಅನಾಥವಾಗಿದ್ದವು. ಇನ್ನೂ ಕೆಲ ಸಮಯದವರೆಗೆ ತಾಯಿಯ ಹಾಲು ಕುಡಿಯಬೇಕಾದ ಮರಿಗಳು ಇನ್ನೇನೂ ಸತ್ತೇ ಹೋಗಬಹುದು ಎನ್ನುವಷ್ಟರಲ್ಲಿ ಹಂದಿಯೊಂದು ತಾಯಿಯ ರೂಪದಲ್ಲಿ ಬಂದು ನಾಯಿಮರಿಗಳಿಗೆ ಹೊಸ ಬದುಕು ನೀಡುತ್ತಿದೆ. ಸದ್ಯ ನಗರದ ಆದರ್ಶ ಪ್ರೌಢಶಾಲೆಯ ಶಿಕ್ಷಕರಾದ ಸುಭಾಸ.ಎಸ್.ರಾಥೋಡ ಅವರು ಈ ನಾಯಿ ಮರಿಗಳ ಬಗ್ಗೆ ವಿಶೇಷ ಲಕ್ಷ್ಯವನ್ನಿಟ್ಟು ಕಾಪಾಡಿಕೊಂಡು ಬರುತ್ತಿದ್ದಾರೆ. ಕಳೆದೆರಡು ತಿಂಗಳುಗಳಿಂದ ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹೀಗೆ ದಿನಕ್ಕೆ ಮೂರು ಬಾರಿ ಹಂದಿ ಬಂದು ಈ ನಾಯಿಮರಿಗಳಿಗೆ ಹಾಲುಣಿಸುತ್ತಿದೆ. ಯಾವುದೋ ಜಾತಿಯ, ಯಾವುದೋ ಹೊಟ್ಟೆಯಲ್ಲಿ ಹುಟ್ಟಿದ್ದ ತಬ್ಬಲಿ ನಾಯಿ ಮರಿಗಳಿಗೆ ತಾಯಿಯ ರೂಪದಲ್ಲಿ ಬಂದಿರುವ ಹಂದಿಯ ಮಾತೃ ಹೃದಯ ಹಾಗೂ ಹೃದಯವೈಶಾಲ್ಯತೆ ಅನೇಕತೆಯಲ್ಲಿ ಏಕತೆಯನ್ನು ಸಾರ ಹೊರಟಿದೆ. ಸಂಘರ್ಷಕ್ಕಿಂತ ಸಾಮಾರಸ್ಯವೇ ಲೇಸು ಎಂಬುವುದನ್ನು ಈ ಹಂದಿ ಮತ್ತು ನಾಯಿ ಮರಿಗಳು ಮನುಷ್ಯ ಸಮಾಜಕ್ಕೆ ತೋರಿಸುತ್ತಿವೆ.

Video Top Stories