ಹುನಗುಂದ: ಪ್ರಕೃತಿ ವೈಚಿತ್ರ್ಯ, ಬೆಕ್ಕಿಗೆ ಹಾಲುಣಿಸುವ ವರಾಹ

ಹಂದಿ ಹಾಲು ಕುಡಿಯುತ್ತಿರುವ ಬೆಕ್ಕು| ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ನಡೆದ ಘಟನೆ| ನಿತ್ಯ ವರಾಹದ (ಹಂದಿ) ಹಾಲು ಕುಡಿಯುತ್ತಿರುವ ಬೆಕ್ಕು| 

First Published Oct 25, 2020, 3:26 PM IST | Last Updated Oct 25, 2020, 3:26 PM IST

ಬಾಗಲಕೋಟೆ(ಅ.25): ಬೆಕ್ಕೊಂದು (ಹಂದಿ) ಹಾಲು ಕುಡಿಯುತ್ತಿರುವ ವಿಚಿತ್ರವಾದ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ನಡೆದಿದೆ. ನಿತ್ಯ ಬೆಕ್ಕು ಹಂದಿ ಹಾಲು ಕುಡಿಯುವ ಮೂಲಕ ಗಮನ ಸೆಳೆದಿದೆ. ಕಳೆದ ನಾಲ್ಕೈದು ದಿನಗಳಿಂದ ವರಾಹದೊಂದಿಗೆ ಈ ಬೆಕ್ಕು ವಾಸಿಸುತ್ತಿದೆ.

ಮನವಿ ಮಾಡುವ ಮೂಲಕ ಟ್ರೆಂಡ್ ಕ್ರಿಯೇಟ್ ಮಾಡಿದ ಕೆಜಿಎಫ್ ಫ್ಯಾನ್ಸ್!

ಬೆಕ್ಕು ಹಂದಿ ಹಾಲು ಕುಡಿಯುತ್ತಿರುವ ಅಪರೂಪದ ದೃಶ್ಯವನ್ನ ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ಬೆಕ್ಕು ಮಲಗಿದ್ದ ಹಂದಿಯ ಹಾಲು ಕುಡಿದು, ಮೈಮೇಲೆ ಬಿದ್ದು ಆಟವಾಡುತ್ತ ಅನ್ಯೋನ್ಯವಾಗಿದೆ. 
 

Video Top Stories