ಸಿಎಂ ತವರಲ್ಲಿ ಅಯಿಲ್ ಮಾಫಿಯಾ ಬಟಾಬಯಲು..!

ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ಶಾಕಿಂಗ್ ನ್ಯೂಸ್. ನೀವು ಹಿಂದೆಂದೂ ಕಂಡಿರದ ಕರಾಳ ದಂಧೆಯ ಕರಾಮತ್ತು. ಈ ಕಾಳ ದಂಧೆಯಲ್ಲಿ ಎಂತೆಂತಹವರು ಶಾಮೀಲಾಗ್ತಾರೆ ಗೊತ್ತಾ?. ಸುವರ್ಣನ್ಯೂಸ್.ಕಾಂ ಬಿಚ್ಚಿಟ್ಟಿದೆ ಈ ಮಾಫಿಯಾದ ಕರಾಳ ಮುಖ

First Published Jun 26, 2020, 5:30 PM IST | Last Updated Jun 26, 2020, 7:27 PM IST

ಶಿವಮೊಗ್ಗ(ಜೂ.26): ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಕಡೆ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದ್ದರೆ, ಇನ್ನೊಂದು ಕಡೆ ಪೆಟ್ರೋಲ್ ಬಂಕ್‌ಗಳೇ ಗ್ರಾಹಕರಿಗೆ ಮೋಸ ಮಾಡುತ್ತವೆ ಎನ್ನುವ ಆರೋಪ ಹಳೆಯದ್ದು. ಈಗ ಬಂಕ್ ಮಾಲೀಕರೇ ಮೋಸ ಹೋಗುತ್ತಿರುವ ಕರಾಳ ಸತ್ಯ ಬಯಲಾಗಿದೆ.

ಇದು ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ಶಾಕಿಂಗ್ ನ್ಯೂಸ್. ನೀವು ಹಿಂದೆಂದೂ ಕಂಡಿರದ ಕರಾಳ ದಂಧೆಯ ಕರಾಮತ್ತು. ಈ ಕಾಳ ದಂಧೆಯಲ್ಲಿ ಎಂತೆಂತಹವರು ಶಾಮೀಲಾಗ್ತಾರೆ ಗೊತ್ತಾ?. ಸುವರ್ಣನ್ಯೂಸ್.ಕಾಂ ಬಿಚ್ಚಿಡಲಿದೆ ಈ ಮಾಫಿಯಾದ ಕರಾಳ ಮುಖ

ಕೇಂದ್ರದ ಬಂಪರ್, ಮೂರು ಪಟ್ಟು ವೇತನ ಹೆಚ್ಚಳ, ಯಾರಿಗೆ ಸಿಗುತ್ತೆ?

ಪೆಟ್ರೋಲಿಯಂ ಉತ್ಪನ್ನಗಳನ್ನು ಬಂಕ್ ಗಳಿಗೆ ಪೂರೈಕೆ ಮಾಡುವ ಅಯಿಲ್ ಟ್ಯಾಂಕರ್ ವಾಹನಗಳೇ ಮೋಸದ ಸೆಂಟರ್ ಆಫ್ ಅಟ್ರ್ಯಾಕ್ಷನ್. ಸಿಎಂ ತವರೂರು ಶಿವಮೊಗ್ಗದಲ್ಲಿ ಈ ದಂಧೆಯ ಅಸಲಿ ಕಹಾನಿ ಬಟಾ ಬಯಲಾಗಿದೆ. ಶಿವಮೊಗ್ಗ ತಾಲೂಕಿನ ಹಾರ್ನಹಳ್ಳಿಯ ಹೆಚ್.ಪಿ ಪೆಟ್ರೋಲ್ ಬಂಕ್‌ನಲ್ಲಿ ಆಕ್ರಮ ಅಯಿಲ್ ಟ್ಯಾಂಕರ್ ಮಾಫಿಯಾ ಎಕ್ಸ್‌ಪೋಸ್ ಆಗಿದೆ. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.

Video Top Stories