Asianet Suvarna News Asianet Suvarna News

ಇಲ್ಲಿ ಆಧಾರ್ ಮಾಡಿಸಲು ರಾತ್ರಿಯೇ ಬಂದು ತಂಗಬೇಕು: ಎಂಥ ದುಸ್ಥಿತಿ?

ಹೀಗೆ ಕೊರೆಯುವ ಚಳಿಯನ್ನು ಲೆಕ್ಕಿಸದೆ ಮಕ್ಕಳ ಸಮೇತ ಕಾಯುತ್ತಿರುವ ಜನ. ಇದು ಅಟಲ್‌ಜಿ ಆಧಾರ ಕೇಂದ್ರದ ಪರಿಸ್ಥಿತಿ. ಈ ಕೇಂದ್ರದ ಸಿಬ್ಬಂದಿ ಪ್ರತಿ ದಿನ 40-50 ಅರ್ಜಿಗಳನ್ನು ಮಾತ್ರ ನೀಡುತ್ತಿದ್ದು, ಆಧಾರ ಕಾರ್ಡ್ ಮಾಡಿಸಲು ನಿತ್ಯವೂ ಸುಮಾರು 200 ಜನ ಹಿಂದಿನ ರಾತ್ರಿಯೇ ಬಂದು ಕೇಂದ್ರದಲ್ಲಿ ತಂಗುತ್ತಿದ್ದಾರೆ.

ಧಾರವಾಡ(ಜ.17): ಹೀಗೆ ಕೊರೆಯುವ ಚಳಿಯನ್ನು ಲೆಕ್ಕಿಸದೆ ಮಕ್ಕಳ ಸಮೇತ ಕಾಯುತ್ತಿರುವ ಜನ. ಇದು ಅಟಲ್‌ಜಿ ಆಧಾರ ಕೇಂದ್ರದ ಪರಿಸ್ಥಿತಿ. ಈ ಕೇಂದ್ರದ ಸಿಬ್ಬಂದಿ ಪ್ರತಿ ದಿನ 40-50 ಅರ್ಜಿಗಳನ್ನು ಮಾತ್ರ ನೀಡುತ್ತಿದ್ದು, ಆಧಾರ ಕಾರ್ಡ್ ಮಾಡಿಸಲು ನಿತ್ಯವೂ ಸುಮಾರು 200 ಜನ ಹಿಂದಿನ ರಾತ್ರಿಯೇ ಬಂದು ಕೇಂದ್ರದಲ್ಲಿ ತಂಗುತ್ತಿದ್ದಾರೆ. 30-40 ಕೀ. ಮಿ. ದೂರದಿಂದ ಬರುವ ಜನ, ಮರುದಿನ ಬೆಳಗ್ಗೆ ಆಧಾರ್ ಕಾರ್ಡ್ ಮಾಡಿಸಲು ಕಾಯುತ್ತಾರೆ. ಅಲ್ಲದೇ ತ್ವರಿತವಾಗಿ ಆಧಾರ ಕಾರ್ಡ್ ಬೇಕೆಂದರೆ ಸಿಬ್ಬಂದಿಗೆ 400-500 ರೂ. ಕೊಡಬೇಕು ಎಂದು ಜನ ಆರೋಪಿಸುತ್ತಾರೆ.  ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಸೇವಾ ಕೆಂದ್ರಗಳನ್ನು ತೆರೆಯುವಂತೆ ಜನ ಆಗ್ರಹಿಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..