Asianet Suvarna News Asianet Suvarna News

ಯುವತಿ ಮೇಲೆ ಚಪ್ಪಲಿ ಎಸೆತ, ದೂರು ಕೊಟ್ಟಿದ್ದಕ್ಕೆ ಸಾಮಾಜಿಕ ಬಹಿಷ್ಕಾರ

ಈ ಆಧುನಿಕ ದಿನಗಳಲ್ಲಿಯೂ ಸಾಮಾಜಿಕ ಬಹಿಷ್ಕಾರ ಎನ್ನುವ ಅನಿಷ್ಟ ಪದ್ಧತಿ ಮಾತ್ರ ಮುಗಿದಿಲ್ಲ. ಮೈಸೂರಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ವೃದ್ಧ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.

ಮೈಸೂರು(ಫೆ.05): ಈ ಆಧುನಿಕ ದಿನಗಳಲ್ಲಿಯೂ ಸಾಮಾಜಿಕ ಬಹಿಷ್ಕಾರ ಎನ್ನುವ ಅನಿಷ್ಟ ಪದ್ಧತಿ ಮಾತ್ರ ಮುಗಿದಿಲ್ಲ. ಮೈಸೂರಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ವೃದ್ಧ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.

ಸಾಮಾಜಿಕ ಬಹಿಷ್ಕಾರದ ಪಿಡುಗು ಇನ್ನೂ ಜೀವಂತವಾಗಿದ್ದು, ಕ್ಷುಲ್ಲಕ ಕಾರಣಕ್ಕೆ ವೃದ್ಧ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಚಪ್ಪಲಿ ಏಟು ತಿಂದವರೆ ಗ್ರಾಮದಿಂದ ಹೊರಗೆ ಹೋಗುವ ಪರಿಸ್ಥಿತಿ ಉಂಟಾಗಿದ್ದು, ಕುಟುಂಬ ಶಾಸಕ ಹರ್ಷವರ್ಧನ್ ಮುಂದೆ ಕಣ್ಣೀರಿಟ್ಟು ಅಳಲು ತೋಡಿಕೊಂಡಿದೆ.

ಸೆಕ್ಸ್‌ಗೆ ಸಹಕರಿಸದ ಚಿಕ್ಕಮ್ಮನನ್ನೇ ಕೊಂದ ಕಾಮುಕ..!

ಗ್ರಾಮದಲ್ಲಿ ಯಾರೂ ಮಾತನಾಡುತ್ತಿಲ್ಲ. ಯಾವುದೇ ಕೆಲಸ ಕಾರ್ಯಗಳಿಗೆ ಕರೆಯುತ್ತಿಲ್ಲ ಎಂದು ವೃದ್ಧ ಕುಟುಂಬ ಅಳಲು ತೋಡಿಕೊಂಡಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬೆಳಲೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಭಾಗ್ಯಮ್ಮ ಎಂಬ ಅವಿವಾಹಿತ ಮಹಿಳೆಗೆ ಮಾನಸಿಕ ಕಿರುಕುಳ ನೀಡಲಾಗಿದೆ. ದಿನನಿತ್ಯ ಹೂವು ಮಾರಿ ಜೀವನ ಸಾಗಿಸುತ್ತಿರುವ ವೃದ್ಧ ಕುಟುಂಬದ ಭಾಗ್ಯಮ್ಮ ಮೇಲೆ ಗ್ರಾಮದ ವ್ಯಕ್ತಿ ಚಪ್ಪಲಿ ಎಸೆದಿದ್ದಾನೆ.

ಈ ಬಗ್ಗೆ ಈರನಾಯಕನ‌ ಮತ್ತೊಬ್ಬ ಮಗಳು ದೂರು ಕೊಟ್ಟಿದ್ದಾರೆ. ಇದನ್ನು ಅಸ್ತ್ರವನ್ನಾಗಿ ಮಾಡಿಕೊಂಡ ಬೆಳಲೆ ಗ್ರಾಮಸ್ಥರು ಈರನಾಯಕ ಕುಟುಂಬಕ್ಕೆ ಹತ್ತು ದಿನಗಳಿಂದ ಸಾಮಾಜಿಕ ಬಹಿಷ್ಕಾರ ಹೇರಿದ್ದಾರೆ. ಶಾಸಕ ಹರ್ಷ ವರ್ಧನ್‌ ಅವರು ಗ್ರಾಮದ ಗುದ್ದಲಿ ಪೂಜೆಗೆ ತೆರಳಿದ ಸಂದರ್ಭದಲ್ಲಿ ನೋವು ತೋಡಿಕೊಂಡ ಮಹಿಳೆ ನ್ಯಾಯಕ್ಕಾಗಿ ಶಾಸಕರ ಮುಂದೆ ಅಂಗಲಾಚಿದ್ದಾರೆ. ನ್ಯಾಯ ಕೊಡಿಸುವ ಭರವಸೆ ಕೊಟ್ಟ ಶಾಸಕ ಹರ್ಷವರ್ಧನ್ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

Video Top Stories