ಲಾಕ್‌ಡೌನ್ ಲೆಕ್ಕಕ್ಕೇ ಇಲ್ಲ, ಕೆರೆ ಮೀನಿಗೆ ಮುಗಿಬಿದ್ದ ಜನ, ಇಲ್ಲಿದೆ ವಿಡಿಯೋ
ಜನ ಮರುಳೋ, ಜಾತ್ರೆ ಮರುಳೋ.. ಎಂಬಂತೆ ಲಾಕ್‌ಡೌನ್ ನಡುವೆಯೂ ಕೆರೆ ಮೀನಿಗಾಗಿ ಜನ ಮುಗಿಬಿದ್ದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಸಾಮಾಜಿಕ ಅಂತರವೂ ಇಲ್ಲ, ದೈಹಿಕ ಸುರಕ್ಷತೆಯೂ ಇಲ್ಲದೆ ಜನ ಮೀನಿಗೆ ಮುಗಿಬಿದ್ದಿದ್ದಾರೆ. ಇಲ್ಲಿದೆ ವಿಡಿಯೋ
ಮಡಿಕೇರಿ(ಏ.23): ಜನ ಮರುಳೋ, ಜಾತ್ರೆ ಮರುಳೋ.. ಎಂಬಂತೆ ಲಾಕ್‌ಡೌನ್ ನಡುವೆಯೂ ಕೆರೆ ಮೀನಿಗಾಗಿ ಜನ ಮುಗಿಬಿದ್ದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಸಾಮಾಜಿಕ ಅಂತರವೂ ಇಲ್ಲ, ದೈಹಿಕ ಸುರಕ್ಷತೆಯೂ ಇಲ್ಲದೆ ಜನ ಮೀನಿಗೆ ಮುಗಿಬಿದ್ದಿದ್ದಾರೆ.
ಸರ್ಕಾರದ ಆದೇಶಕ್ಕಿಲ್ಲಿ ಕಿಮ್ಮತ್ತೇ ಇಲ್ಲ ಎಂಬಂತೆ ಮಡಿಕೇರಿ ಹೊರವಲಯದ ಕಗ್ಗೋಡ್ಲು ಗ್ರಾಮದಲ್ಲಿ ಜನಜಾತ್ರೆ ನಡೆದಿದೆ. ಕೆರೆಯಲ್ಲಿ ಮೀನು ಹಿಡಿದು ಮಾರಾಟ ಮಾಡಿದ ಕೃಷಿಕ ತೇಜಸ್ ಅವರಿಂದ ಮೀನು ಕೊಳ್ಳಲು ಜನತೆ ಮುಗಿಬಿದ್ದಿದ್ದಾರೆ.
'ನೀನ್ಯಾವ ಸೀಮೆ ತೋತಪ್ಪ ನಾಯಕ'..? ಜಮೀರ್‌ಗೆ ಸಿಟಿ ರವಿ ವ್ಯಂಗ್ಯ
ಮೀನು ಹಿಡಿಯುವ ವಿಷಯ ತಿಳಿದು ಜನ ತಂಡೋಪತಂಡವಾಗಿ ಆಗಮಿಸಿದ್ದಾರೆ. ಜನಜಾತ್ರೆಯಿದ್ದರೂ ಜಿಲ್ಲಾಡಳಿತ ಕ್ಯಾರೇ ಎಂದಿಲ್ಲ. ಜನರಿಗೆ ಕಾಳಜಿಯೂ ಇಲ್ಲ, ವ್ಯವಸ್ಥೆಯ ಭಯವೂ ಇಲ್ಲ ಎಂಬಂತ ವಾತಾವರಣ ನಿರ್ಮಾಣವಾಗಿತ್ತು.