Asianet Suvarna News Asianet Suvarna News

ಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಜನರ, ಪ್ರತಿಷ್ಠೆಗಾಗಿ ನಡುಬೀದಿಯಲ್ಲೇ ಜನಪ್ರತಿನಿಧಿಗಳ ಬಡಿದಾಟ!

ಒಣ ಪ್ರತಿಷ್ಠೆಗಾಗಿ ನಡುಬೀದಿಯಲ್ಲೇ ಬಡಿದಾಡಿಕೊಂಡ ಜನಪ್ರತಿನಿಧಿಗಳು|ಬೆಳಗಾವಿ ತಾಲೂಕಿನ ಶಿವಕೋಟೆ ಗ್ರಾಮದಲ್ಲಿ ನಡೆದ ಘಟನೆ| ಕೆಎಂಎಫ್‌ನಿಂದ ಬಂದಿದ್ದ ಹಾಲನ್ನು ಹಂಚಲು ವಿಭಾಗ ಮಾಡಿಕೊಳ್ಳುವ ವೇಳೆ ಜಗಳ| ಶಿವಕೋಟೆ ಗ್ರಾ. ಪಂ. ಸದಸ್ಯರು ಹಾಗೂ ಮಾಜಿ ಜಿ.ಪಂ ಸದಸ್ಯನ ಮಧ್ಯೆ ವಾಗ್ವಾದ|

ಬೆಳಗಾವಿ(ಏ.15): ಲಾಕ್‌ಡೌನ್‌ ವೇಳೆಯಲ್ಲಿ ಜನರು ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಆದರೆ, ಜನಪ್ರತಿನಿಧಿಗಳು ಮಾತ್ರ ಒಣ ಪ್ರತಿಷ್ಠೆಗಾಗಿ ನಡುಬೀದಿಯಲ್ಲೇ ಬಡಿದಾಡಿಕೊಂಡ ಘಟನೆ ತಾಲೂಕಿನ ಶಿವಕೋಟೆ ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. 

ಬೆಂಗಳೂರಿನ ಈ 40 ವಾರ್ಡ್‌ಗಳು ಕೊರೋನಾ ಡೇಂಜರ್, ಅಪ್ಪಿ ತಪ್ಪಿ ಹೆಜ್ಜೆ ಇಟ್ರೆ!

ಕೆಎಂಎಫ್‌ನಿಂದ ಬಂದಿದ್ದ ಹಾಲನ್ನು ಹಂಚಲು ವಿಭಾಗ ಮಾಡಿಕೊಳ್ಳುವ ವೇಳೆ ಶಿವಕೋಟೆ ಗ್ರಾ. ಪಂ. ಸದಸ್ಯರು ಹಾಗೂ ಮಾಜಿ ಜಿ.ಪಂ ಸದಸ್ಯ ನಡುವೆ ಜಗಳ ನಡೆದಿದೆ. ಇವರ ಜಗಳದ ಮಧ್ಯೆ ಬಡವರ ಹೊಟ್ಟೆ ಸೇರಬೇಕಿದ್ದ ಹಾಲು ಮಣ್ಣು ಪಾಲಾಗಿದೆ. ಹಾಲಿನ ಪ್ಯಾಕೇಟ್‌ಗಳನ್ನೇ ನಡುರಸ್ತೆಯಲ್ಲೇ ಚೆಲ್ಲಿ ತುಳಿದಾಡಿ ರಂಪಾಟ ಮಾಡಿಕೊಂಡಿದ್ದಾರೆ. 
 

Video Top Stories