Asianet Suvarna News Asianet Suvarna News
breaking news image

ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ: ಜೀವ ಕೈಯಲ್ಲಿ ಹಿಡಿದು ಕುಳಿತ ಜನತೆ

ಅಕ್ರಮ ಗಣಿಕಾರಿಕೆಯಿಂದ ಬೇಸತ್ತ ಗ್ರಾಮಸ್ಥರು| ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ| ಬಿರುಕು ಬಿಟ್ಟ ನೂರಾರು ಮನೆಗಳು| ಜೀವ ಭಯದಲ್ಲೇ ಬದುಕು ಸಾಗಿಸುತ್ತಿರುವ ಜನತೆ| 

ಹುಬ್ಬಳ್ಳಿ(ಫೆ.17): ಕಳೆದೊಂದು ದಶಕದಿಂದ ನಡೆಯುತ್ತಿರುವ ಅಕ್ರಮ ಗಣಿಕಾರಿಕೆಯಿಂದ ಧಾರವಾಡ ಜಿಲ್ಲೆಯ ತಾಲೂಕಿನ ಗಬ್ಯಾಪುರ, ಎಮ್ಮೇಟಿ, ಲಿಂಗನಕೊಪ್ಪ ಗ್ರಾಮದ ಜನರು  ಜೀವ ಭಯದಲ್ಲೇ ವಾಸಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 

ಕಾಂಗ್ರೆಸ್ ಮುಖಂಡ ಸಿ. ಜಿ. ಪಾಟೀಲ ಹಾಗೂ ಪ್ರಭಾವಿ ಗುತ್ತಿಗೆದಾರ ಎನ್‌. ಎಸ್. ನಾಯಕ ಒಡೆತನದ ಕಂಪನಿ ನಡೆಸುತ್ತಿರುವ ಅಕ್ರಮ ಗಣಿಕಾರಿಕೆಯಿಂದ ಈ ಗ್ರಾಮಗಳಲ್ಲಿನ ನೂರಾರು ಮನೆಗಳು ಬಿರುಕು ಬಿಟ್ಟಿವೆ. ಈ ಸಂಬಂಧ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಇಲ್ಲಿನ ಜನತೆ ಊರು ಬಿಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸುವರ್ಣ ನ್ಯೂಸ್ ವರದಿಯೊಂದನ್ನ ಬಿತ್ತರಿಸಿದೆ. 
 

Video Top Stories