Asianet Suvarna News Asianet Suvarna News

ಹಾಸನ: ಹಸು ಕೊಂದು ಎಳೆದೊಯ್ದ ಚಿರತೆ, ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಚಿರತೆ ಹಸು ಬೇಟೆಯಾಡಿರುವ ದೃಶ್ಯ ನೋಡಿ ಬೆಚ್ಚಿಬಿದ್ದ ಜನತೆ 

First Published Oct 30, 2022, 1:40 PM IST | Last Updated Oct 30, 2022, 1:40 PM IST

ಹಾಸನ(ಅ.30):  ಹಸು ಕೊಂದು ಹಸುವನ್ನು ‌ಚಿರತೆ ಎಳೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಸನ ತಾಲೂಕಿನ ‌ಶಾಂತಿಗ್ರಾಮ ಬಳಿಯ ಕಾರೆಕೆರೆಯಲ್ಲಿ ಈ ಘಟನೆ ನಡೆದಿದೆ. ಹಸುವಿನ ಕುತ್ತಿಗೆಗೆ ಬಾಯಿ ಹಾಕಿ ಚಿರತೆ ಎಳೆದೊಯ್ದಿದೆ. ಹಸುವನ್ನು ತಿನ್ನಲು ಒಂದು ಕಡೆಯಿಂದ ಮತ್ತೊಂದು ಕಡೆಗೆ ಎಳೆದೊಯ್ದಿದೆ ಚಿರತೆ. ಕಣ್ಣುಗಳಿಂದ ದಿಟ್ಟಿಸಿ ನೋಡಿ ಹಸು ಕುತ್ತಿಗೆಗೆ ಬಾಯಿ ಹಾಕಿದೆ ಚಿರತೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನು ಇಟ್ಟಿದೆ. ಈ ಹಿಂದೆಯೂ ಕೂಡ ಒಂದು‌ ಕರುವನ್ನ ಚಿರತೆ ತಿಂದಿತ್ತು. ಚಿರತೆ ಉಪಟಳದಿಂದ ಕಾರೆಕೆರೆ ಸುತ್ತಮುತ್ತಲ ಜನರು ಆತಂಕಗೊಂಡಿದ್ದಾರೆ. ಚಿರತೆ ಹಸು ಬೇಟೆಯಾಡಿರುವ ದೃಶ್ಯದಿಂದ ಸುತ್ತಮುತ್ತಲ ಜನತೆ ಬೆಚ್ಚಿಬಿದ್ದಿದ್ದಾರೆ. 

ಬೆಂಗಳೂರು: ಸರ್ಕಾರದಿಂದಲೇ ಚಾಮರಾಜಪೇಟೆ ಈದ್ಗಾದಲ್ಲಿ ಕನ್ನಡ ರಾಜ್ಯೋತ್ಸವ?

Video Top Stories