ಬಾಗಲಕೋಟೆಯಲ್ಲಿ ಪೇಜಾವರ ಶ್ರೀಗಳ ಸಂಸ್ಮರಣೆ ಕಾರ್ಯಕ್ರಮ

ಸಂಸ್ಮರಣೆ ಕಾಯ೯ಕ್ರಮದಲ್ಲಿ ಪೇಜಾವರ ಶ್ರೀಗಳ ಬಾಗಲಕೋಟೆ ನಂಟು ಕುರಿತು ನೆನೆದ ರಾಜಕೀಯ ನಾಯಕರು| ಸಂಸ್ಮರಣೆ  ಕಾರ್ಯಕ್ರಮ ಆರಂಭಕ್ಕೂ ಮುನ್ನ ಪೇಜಾವರ ಶ್ರೀಗಳಿಗೆ ಒಂದು ನಿಮಿಷ ಮೌನಾಚರಣೆ| ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು|

First Published Jan 11, 2020, 2:51 PM IST | Last Updated Jan 11, 2020, 2:51 PM IST

ಬಾಗಲಕೋಟೆ(ಜ.11): ನಗರದಲ್ಲಿ ಶತಮಾನದ ಸಂತ ಉಡುಪಿಯ ಪೇಜಾವರ ಶ್ರೀಗಳ ಸಂಸ್ಮರಣೆ ಕಾರ್ಯಕ್ರಮ ನಡೆಸಲಾಯಿತು. ನವನಗರದ ಶ್ರೀ ಕೃಷ್ಣಮಠದ ಸಭಾಭವನದಲ್ಲಿ ನಡೆದ ಸಂಸ್ಮರಣೆ  ಕಾರ್ಯಕ್ರಮ ಆರಂಭಕ್ಕೂ ಮುನ್ನ ಪೇಜಾವರ ಶ್ರೀಗಳಿಗೆ ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು. ಬಳಿಕ ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು. 

ಈ ಸಂಸ್ಮರಣೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಶಾಸಕ ವೀರಣ್ಣ ಚರಂತಿಮಠ, ಮಾಜಿ ಶಾಸಕರಾದ ಪಿ.ಎಚ್.ಪೂಜಾರ, ನಾರಾಯಣಸಾ ಭಾಂಡಗೆ ಸೇರಿ ಹಲವರು ಭಾಗಿಯಾಗಿದ್ದರು. ಸಂಸ್ಮರಣೆ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ನಾಯಕರು ಸಹ ಪೇಜಾವರ ಶ್ರೀಗಳ ಬಾಗಲಕೋಟೆ ಜೊತೆಗಿನ ನಂಟು ಕುರಿತು ಎಳೆಎಳೆಯಾಗಿ ನೆನೆದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.