Asianet Suvarna News Asianet Suvarna News

ಶಿವಮೊಗ್ಗ:  ಆನ್ ಲೈನ್‌ನಲ್ಲಿ ಮಗನ ಮದುವೆ  ನೋಡಿ ಅಕ್ಷತೆ ಹಾಕಿದ ಪೋಷಕರು

ಫೇಸ್ ಬುಕ್ ಲೈವ್ ‌ನಲ್ಲಿ ಮಗನ ಮದುವೆ ವೀಕ್ಷಣೆ ಮಾಡಿ ಅಕ್ಷತೆ ಹಾಕಿದ ವರನ ಪೋಷಕರು/ ಬೆಂಗಳೂರಿನ ಮದುವೆ ಶಿವಮೊಗ್ಗದಿಂದ ವೀಕ್ಷಣೆ/ ಕೊರೋನಾ ಕಾರಣಕ್ಕೆ ಸರಳ  ಮದುವೆ

First Published May 14, 2020, 9:12 PM IST | Last Updated May 14, 2020, 9:29 PM IST

ಶಿವಮೊಗ್ಗ(ಮೇ 14)  ಕೊರೋನಾ ಕಾರಣಕ್ಕೆ ಮದುವೆಯನ್ನು ಸರಳವಾಗಿ ಮಾಡಿ ಮುಗಿಸಿ, ಹೆಚ್ಚಗೆ ಜನರನ್ನು ಕರೆಯಬೇಡಿ ಎಂದು ಸರ್ಕಾರ ಹೇಳುತ್ತಿದೆ. ಇದಕ್ಕೆ ತಕ್ಕ  ಉದಾಹರಣೆ ಎಂಬಂತೆ ನಡೆದ ಮದುವೆಯೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. 

 ಫೇಸ್ ಬುಕ್ ಲೈವ್ ‌ನಲ್ಲಿ ಹಾಗೂ ವಾಟ್ಸಪ್ಪಲ್ಲಿ ಬಂದ ಮಗನ ಮದುವೆ ಟಿವಿ ಪರದೆ ಯಲ್ಲಿ ವೀಕ್ಷಿಸಿ  ಮಾಂಗಲ್ಯಂ ತಂತುನಾನೇನ ಎಂದು ಹೇಳಿದ ಕ್ಷಣ ಅಕ್ಷತೆ ಹಾಕಿ ಆಶೀರ್ವದಿಸಿದ ಅಪರೂಪದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. 

ಮನೆಯಲ್ಲೇ ಇರಿ ಎಂದು ಕರೆಕೊಟ್ಟ ನವವಜೋಡಿ

ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮದ ಜ್ಯೋತಿಷಿ ಲಕ್ಷ್ಮಿ ನಾರಾಯಣ ಜೋಯಿಸ್ ಹಾಗೂ ಅಲ್ಲಿನ ಗ್ರಾಮ ಪಂಚಾಯತ್ ಸದಸ್ಯೆ ಜಯಲಕ್ಷ್ಮಿ ರವರ ಪುತ್ರ ಶಿವ ಶ್ಚಂದ್ರ ಜೋಯ್ಸ್ ರವರ ವಿವಾಹ  ಬೆಂಗಳೂರಿನ ಶೈಲಜಾ ಮತ್ತು ಚಂದ್ರಶೇಖರ್ ರವರ ಪುತ್ರಿ ಕಾವ್ಯ ರವರೊಂದಿಗೆ ಪುರೋಹಿತರ ಹಾಗೂ ಆಯ್ದ ಬಂಧುಮಿತ್ರರ ಸಮ್ಮುಖದಲ್ಲಿ ನೆರವೇರಿತು ವಾಲಗ ಬ್ಯಾಂಡ್ ಗಟ್ಟಿಮೇಳ ಗಳಿಲ್ಲದೆ ಶಾಮಿಯಾನ ಸಂಭ್ರಮದ ಅಲಂಕಾರಗಳಿಲ್ಲದ ಅಪಾರ್ಟ್ಮೆಂಟ್ ನಲ್ಲಿದ್ದ ಮದುಮಗಳ ಮನೆಯ ಕೆಳ ಅಂತಸ್ತಿನಲ್ಲಿ ನಡೆದ ಮದುವೆ ಜಗತ್ತಿಗೆ ಸಾಕ್ಷಿಯಾಯಿತು.

 ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಶಿವಸ್ ಚಂದ್ರ ಜೋಯಿಸ್ ಭರತನಾಟ್ಯ ಕಲಾವಿದೆ ಶಿಕ್ಷಕಿ ಕಾವ್ಯಳ ಕೈಹಿಡಿದು ಪುರೋಹಿತರು ಮಾಂಗಲ್ಯಂ ತಂತುನಾನೇನ..... ಎಂದು ಪಾಣಿಗ್ರಹಣ ಮಾಡಿಸಿದಾಗ 300 ಕಿಲೋ ಮೀಟರ್ ದೂರದಲ್ಲಿದ್ದ ವರನ ತಂದೆ ತಾಯಿ ಮಹಾಮಾರಿ ಕೊರೊನಾ ಸಂಬಂಧ ಮದುವೆಗೆ ಹೋಗಲಾಗದ ಕಾರಣ ತಮ್ಮ ಮನೆಯಲ್ಲಿದ್ದ ಟಿವಿಯಲ್ಲಿ ಫೇಸ್ ಬುಕ್ ಮೂಲಕ ಬರುತ್ತಿದ್ದ ನೇರಪ್ರಸಾರವನ್ನು ಸಂಭ್ರಮದ ಕ್ಷಣಗಳನ್ನು ಅಕ್ಷತೆ ಹಾಕಿ ಆಶೀರ್ವದಿಸುವ ಮೂಲಕ ಸಂತೋಷದ ಕ್ಷಣಗಳನ್ನು ಸಂಭ್ರಮಿಸಿದರು. 

 ಬೆಂಗಳೂರು ಬಸವನಗುಡಿಯ ಶಂಕರಪುರಂ ಪಂಪಮಹಾಕವಿ ರಸ್ತೆ ಶ್ರೀ ಚಂದ್ರಶೇಖರ ಭಾರತಿ ಕಲ್ಯಾಣ ಮಂದಿರದಲ್ಲಿ ಬೆಳಗ್ಗೆ ವಿವಾಹ ಸಂಭ್ರಮ ನಡೆಸಲು ಈ ಮೊದಲೇ ನಿಶ್ಚಯಿಸಿದ್ದು ಮಹಾಮಾರಿ ಕೊರೋನಾ ವಿಶ್ವದಲ್ಲೇ ಆತಂಕ ಸೃಷ್ಟಿ ಮಾಡಿದ ಕಾರಣ ಸಂಭ್ರಮದ ಅದ್ದೂರಿಯ ಮದುವೆಯನ್ನು ರದ್ದುಗೊಳಿಸಿ ಅಪಾರ್ಟ್ಮೆಂಟಿನ ಕೆಳ ಅಂತಸ್ತಿನಲ್ಲಿ ಸರಳವಾಗಿ ನಡೆಸಲಾಯಿತು.

Video Top Stories