Asianet Suvarna News Asianet Suvarna News

ಪಾದರಾಯನಪುರ ಪುಂಡರ ಹೆಡೆಮುರಿ ಕಟ್ಟಿದ್ದ ಪೊಲೀಸರಿಗೆ ಬಿಗ್ ರಿಲೀಫ್

ಪೊಲೀಸರಿಗೆ ದೊಡ್ಡ ರಿಲೀಫ್/ ಪಾದರಾಯನಪುರದಲ್ಲಿ ಕರ್ತವ್ಯದಲ್ಲಿದ್ದ 84 ಪೊಲೀಸರ ಕೊರೋನಾ ಪರೀಕ್ಷೆ ವರದಿ/ 84 ಪೊಲೀಸರಿಗೂ ನೆಗೆಟಿವ್

ಬೆಂಗಳೂರು(ಏ .26)  ಇದೊಂದು ದೊಡ್ಡ ರಿಲೀಫ್ ಸುದ್ದಿ. ಪಾದರಾಯನಪುರದ 84 ಪೊಲೀಸರು ಸೇಫ್ ಆಗಿದ್ದಾರೆ. ಪಾದರಾಯನಪುರ ಗಲಭೆ ವೇಳೆ ಕರ್ತವ್ಯದಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

ಜಮೀರ್ ಅಹಮದ್ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದು ಯಾರ ಒತ್ತಾಯಕ್ಕೆ

ಪರಿಸ್ಥಿತಿ ತಿಳಿಗೊಳಿಸಲು ಹಗಲು ರಾತ್ರಿ ಶ್ರಮಿಸಿದ ಪೊಲೀಸರ ಕೊರೋನಾ ವೈರಸ್ ಪರೀಕ್ಷಾ ವರದಿ ಬಂದಿದ್ದು ನೆಗೆಟಿವ್ ಇದೆ. ಪಾದರಾಯನಪುರದಲ್ಲಿ ಪುಂಡರು ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದರು.