Asianet Suvarna News Asianet Suvarna News

ವಿವಾಹಿತನನ್ನು ಮದುವೆಯಾದ ತಹಸೀಲ್ದಾರ್‌ಗೆ ಡಿಸಿ ನೋಟಿಸ್

Sep 21, 2021, 2:42 PM IST

ಎನ್‌.ಆರ್ ಪುರ(ಸೆ.21): ಎನ್.ಅರ್ ಪುರ ತಹಸೀಲ್ದಾರ್ ಅವರು ವಿವಾಹಿತನನ್ನು ಮದುವೆಯಾಗಿದ್ದಕ್ಕೆ ಡಿಸಿ ನೋಟಿಸ್ ಕಳುಹಿಸಿದ್ದಾರೆ. ತಹಸೀಲ್ದಾರ್ ಗೀತಾ ಅವರು ಗ್ರಾಮ ಲೆಕ್ಕಿಗ ಶ್ರೀನಿಧಿಯನ್ನು ಮದುವೆಯಾಗಿದ್ದರು. 2006ರಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು.

4200 ಸಾರಿಗೆ ನೌಕರರಿಗೆ ಗುಡ್‌ನ್ಯೂಸ್: ಸಾರಿಗೆ ಸಚಿವರು ಏನ್ ಹೇಳಿದ್ದಾರೆ ನೋಡಿ..!

ಆದರೆ ಮೊದಲನೇ ಪತ್ನಿ ಇದ್ದರೂ ಗ್ರಾಮ ಲೆಕ್ಕಿಗ ಎರಡನೇ ಮದುವೆಯಾಗಿದ್ದು, ಶ್ರೀನಿಧಿ ಪತ್ನಿ ನ್ಯಾಯ ಕೊಡಿಸುವಂತೆ ಡಿಸಿ ಮೊರೆ ಹೋಗಿದ್ದಾಳೆ. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್‌ಗೆ ನೋಟಿಸ್ ಕಳುಹಿಸಿದ ಡಿಸಿ ಇದಕ್ಕೆ 7 ದಿನಗಳೊಳಗೆ ಉತ್ತರಿಸುವಂತೆ ಹೇಳಿದ್ದಾರೆ.