Asianet Suvarna News Asianet Suvarna News

ಶಿವಾಜಿನಗರದಲ್ಲಿ ಶಾಪಿಂಗ್: ಲಾಠಿ ರುಚಿ ತೋರಿಸಿದ ಪೊಲೀಸರು

Aug 1, 2020, 1:15 PM IST

ಶಿವಾಜಿನಗರ(ಆ.01): ಕೊರೋನಾ ಭೀತಿಯ ನಡುವೆ ಹಬ್ಬ ಹರಿದಿನಗಳು ಆರಂಭವಾಗಿವೆ. ಇದರ ಬೆನ್ನಲ್ಲೇ ಸಾಮಾಜಿಕ ಅಂತರ ಮರೆತು ಬಕ್ರೀದ್ ಹಬ್ಬಕ್ಕಾಗಿ ಶಿವಾಜಿನಗರದಲ್ಲಿ ಭರ್ಜರಿ ಶಾಪಿಂಗ್ ಮಾಡಿದ್ದಾರೆ.

ತಡರಾತ್ರಿಯಾದ್ರೂ ಶಾಪಿಂಗ್ ಭರಾಟೆ ಜೋರಾಗಿತ್ತು. ಲೈಟ್ ಆಫ್ ಮಾಡಿಕೊಂಡು ಅಂಗಡಿಗಳ ವಹಿವಾಟು ನಡೆಸುವ ದೃಶ್ಯಾವಳಿಗಳು ಶಿವಾಜಿನಗರದಲ್ಲಿ ಸಾಮಾನ್ಯವಾಗಿತ್ತು. ನಿಯಮಗಳನ್ನು ಗಾಳಿಗೆ ತೂರಿ ವ್ಯಾಪಾರ ನಡೆಸುವ ದೃಶ್ಯಗಳು ಕಂಡು ಬಂದವು.

ಕಿಮ್ಸ್‌ನಲ್ಲಿ ವೆಂಟಿಲೇಟರ್ ಸಂಪೂರ್ಣ ಭರ್ತಿ; ಮುಂದುವರೆದ ರೋಗಿಗಳ ಪರದಾಟ

ಬಟ್ಟೆ ಹಾಗೂ ಚಪ್ಪಲಿಗಳನ್ನು ಖರೀದಿಸಲು ಜನ ಬ್ಯುಸಿಯಾಗಿದ್ದರು. ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸರು ಕೆಲವರಿಗೆ ಲಾಠಿ ರುಚಿಯನ್ನು ತೋರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.