Asianet Suvarna News Asianet Suvarna News

ಶರಾವತಿ ಹಿನ್ನೀರ ಪ್ರದೇಶದಲ್ಲಿ ನೆಟ್‌ವರ್ಕ್‌ಗಾಗಿ 'ನೋ ನೆಟ್ವರ್ಕ್, ನೋ ವೋಟಿಂಗ್' ಹೋರಾಟ

- ನೋ ನೆಟ್ವರ್ಕ್​ .. ನೋ ಓಟಿಂಗ್ .. ಎಚ್ಚರಿಕೆ ನೀಡಿದ ಶರಾವತಿ ಹಿನ್ನೀರಿನ ಪ್ರದೇಶದ ಜನತೆ

- ನೆಟ್ವರ್ಕ್​ ಸಮಸ್ಯೆ ಬಗೆಹರಿಸದಿದ್ದರೆ ಮತದಾನ ಬಹಿಷ್ಕಾರದ ಎಚ್ಚರಿಕೆ 

- ವಿದ್ಯಾರ್ಥಿಗಳು , ಐಟಿ ಉದ್ಯೋಗಿಗಳಿಗೆ ಸಮಸ್ಯೆ 

 

ಶಿವಮೊಗ್ಗ (ಜು. 17): ತಮ್ಮೂರಿನಲ್ಲಿ ಸಮರ್ಪಕ ಮೊಬೈಲ್ ನೆಟ್‌ವರ್ಕ್ ವ್ಯವಸ್ಥೆ ಮಾಡದಿದ್ದರೆ ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಶರಾವತಿ ಹಿನ್ನೀರಿನ ಸುಮಾರು ಐದಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಜನ 'ನೋ ನೆಟ್ವರ್ಕ್, ನೋ ವೋಟಿಂಗ್' ಹೋರಾಟ  ಶುರು ಮಾಡಿದ್ದಾರೆ. 

ಇಲ್ಲಿನ ಮಕ್ಕಳು ಆನ್‌ಲೈನ್ ಕ್ಲಾಸ್‌ಗಾಗಿ ನದಿ ತಟಕ್ಕೆ ಹೋಗಲೇಬೇಕು..!

ಶರಾವತಿ ಕಣಿವೆಯ ಮಾರಲಗೋಡು , ಕಟ್ಟಿನಕಾರು, ಮಣಕಂದೂರು , ಅಬ್ಬಿನಾಲೆ, ಚನಕೊಂಡ, ಮತ್ತಿತರ ಗ್ರಾಮಗಳಲ್ಲಿ ಸರಿಯಾದ ನೆಟ್‌ವರ್ಕ್ ಇಲ್ಲದ ಕಾರಣ ಶಾಲಾ - ಕಾಲೇಜು ವಿದ್ಯಾರ್ಥಿಗಳು ಆನ್‌ಲೈನ್ ತರಗತಿ ಕೇಳಲು , ಐಟಿ - ಬಿಟಿ ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್ ಮಾಡುವುದು ಸೇರಿ ಗ್ರಾಮಸ್ಥರ ಇನ್ನಿತರ ಕೆಲಸಗಳಿಗೆ ಸಮಸ್ಯೆಯಾಗುತ್ತಿದೆ . ಈ ಕುರಿತಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ . ಸಮಸ್ಯೆ ಸರಿಪಡಿಸದಿದ್ದರೆ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂದು ತುಮರಿ ಗ್ರಾಪಂ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ನೇತೃತ್ವದಲ್ಲಿ ತುಮರಿ ಗ್ರಾಪಂ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. 

Video Top Stories