Asianet Suvarna News Asianet Suvarna News

ಎಳನೀರು ಕುಡಿದ್ರೆ ಓಕೆ, ಗಂಜಿ ತಿಂದೀರಾ ಜೋಕೆ...!

ಕೊರೊನಾ ತಡೆಯೋಕೆ ಮೈಸೂರಿನಲ್ಲಿ ಹೊಸ ಸುರಕ್ಷತಾ ಕ್ರಮ ತೆಗೆದುಕೊಳ್ಳಲಾಗಿದೆ. ಎಳನೀರು ವ್ಯಾಪಾರಿಗಳು ಇನ್ನು ಮುಂದೆ ಎಳನೀರು ಮಾತ್ರ ಕೊಡಬೇಕು. ಗಂಜಿ ಕೊಡುವಂತಿಲ್ಲ. ಹೀಗೊಂದು ಅಘೋಷಿತ ನಿಯಮ ಮೈಸೂರಿನಲ್ಲಿ ಜಾರಿಯಾಗಿದೆ. 

ಬೆಂಗಳೂರು (ಜೂ. 04): ಕೊರೊನಾ ತಡೆಯೋಕೆ ಮೈಸೂರಿನಲ್ಲಿ ಹೊಸ ಸುರಕ್ಷತಾ ಕ್ರಮ ತೆಗೆದುಕೊಳ್ಳಲಾಗಿದೆ. ಎಳನೀರು ವ್ಯಾಪಾರಿಗಳು ಇನ್ನು ಮುಂದೆ ಎಳನೀರು ಮಾತ್ರ ಕೊಡಬೇಕು. ಗಂಜಿ ಕೊಡುವಂತಿಲ್ಲ. ಹೀಗೊಂದು ಅಘೋಷಿತ ನಿಯಮ ಮೈಸೂರಿನಲ್ಲಿ ಜಾರಿಯಾಗಿದೆ. 

ಚಾಂದನಿ ಚೌಕ್‌ ಸೀಲ್‌ಡೌನ್‌; ಶಿವಾಜಿನಗರ ಬಸ್‌ ನಿಲ್ದಾಣಕ್ಕಿಲ್ಲ ಎಂಟ್ರಿ

ಗ್ರಾಹಕರು ಕೇಳಿದರೂ ಗಂಜಿ ಕೊಡಲ್ಲ, ಎಳನೀರು ಚಿಪ್ಪು ಓಪನ್ ಮಾಡಲ್ಲ.  ಗಂಜಿ ಕೊಡಬಾರದು ಅಂತ ನಿಯಮವೇನೂ ಇಲ್ಲ, ಆದ್ರೆ ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆಯಿಂದ ಮೌಖಿಕ ಸೂಚನೆ ಇದು. ಒಂದು ವೇಳೆ ಎಳನೀರು ಕುಡಿಯುವವರಿಗೆ ಕೋವಿಡ್ 19 ಪಾಸಿಟೀವ್ ಇದ್ದರೆ ಅದು ಮಚ್ಚಿಗೂ ಅಂಟುತ್ತೆ. ವ್ಯಾಪಾರಿ ಮೂಲಕ ಮತ್ತಷ್ಟು ಜನರಿಗೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದ್ದು   ಗಂಜಿ ಕೊಡುವುದಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. 

Video Top Stories