Asianet Suvarna News Asianet Suvarna News

ಕಮಿಷನರ್ ಕಚೇರಿಯಲ್ಲಿ ಉದ್ಯಾನ, ಗಿಡ ನೆಟ್ಟರು ಪಂತ್!

Sep 21, 2021, 10:03 PM IST

ಬೆಂಗಳೂರು(ಸೆ. 21)  ಕಮಿಷನರ್ ಕಚೇರಿಯಲ್ಲಿ  ಉದ್ಯಾನವೊಂದು ಸಿದ್ಧವಾಗುತ್ತಿದೆ. ಬೆಂಗಳೂರು ಕಮಿಷನರ್ ಕಚೇರಿ ಮುಂದೆ ಹಾಳು ಬಿದ್ದಿದ್ದ ಸ್ಥಳ ಈಗ ಉದ್ಯಾನವನವಾಗಿ ಬದಲಾಗುತ್ತಿದೆ.  ಉದ್ಯಾನವನ್ನ ಖುದ್ದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ವೀಕ್ಷಣೆ ಮಾಡಿದ್ದಾರೆ.

ಈ ಉದ್ಯಾನವನವೀಗ ಪಿಕ್  ನಿಕ್ ಸ್ಪಾಟ್

ಯಾವ ಸ್ಥಳದಲ್ಲಿ ಯಾವ ಗಿಡ ನೆಡಲಾಗುತ್ತದೆ ಎಂಬ ಮಾಹಿತಿ ಪಡೆದುಕೊಂಡಿದ್ದಾರೆ. ಉದ್ಯಾನವನದ ಗಿಡ ನೆಡುತ್ತಿದ್ದನ್ನ ನೋಡಿದ ಕಮಲ್ ಪಂತ್ ‌ಸ್ವತಃ ಗಿಡ ನೆಡುವ ಮೂಲಕ ಉದ್ಯಾನವನಕ್ಕೆ ವಿಶೇಷ ರಂಗನ್ನು ತಂದರು.