ತುಮಕೂರು: ಸ್ವಾತಂತ್ರ್ಯ ದಿನಾಚರಣೆಯಂದು ಗೋಡ್ಸೆ ಫೋಟೋ ಹಾಕಿ ಸಂಭ್ರಮ!
ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಗೋಡ್ಸೆ ಫೋಟೋ ಹಾಕಿರುವುದು ಬೆಳಕಿಗೆ ಬಂದಿದೆ.
ಮಧುಗಿರಿ (ಆ.17): ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಗೋಡ್ಸೆ ಫೋಟೋ ಹಾಕಿರುವುದು ಬೆಳಕಿಗೆ ಬಂದಿದೆ. ಭಗತ್ ಸಿಂಗ್ ಯೂತ್ ಅಸೋಸಿಯೇಶನ್ ಹೆಸರಿನಲ್ಲಿ ಮಧುಗಿರಿ ದಂಡಿನ ಮಾರಮ್ಮ ದೇವಾಲಯದ ಎದುರುಗಡೆ ಹಾಕಿರುವ ಫ್ಲೆಕ್ಸ್ ನಲ್ಲಿ ನಾಥೂರಾಮ್ ಗೋಡ್ಸೆ ಫೋಟೋ ಕಂಡುಬಂದಿದ್ದು, ಗಾಂಧೀಜಿಯ ಫೋಟೋದ ಮೇಲ್ಭಾಗದಲ್ಲಿ ಫೋಟೋ ಹಾಕಲಾಗಿದೆ. ಈ ಫ್ಲೆಕ್ಸ್ ಹಾಕಲು ಸ್ಥಳೀಯ ಪಂಚಾಯತ್ ಅನುಮತಿ ಪಡೆದಿಲ್ಲ ಎಂದು ತಿಳಿದುಬಂದಿದೆ ಈ ಕೃತ್ಯ ಮಾಡಿದ್ದು ಯಾರು? ಹಾಕಿದ್ದು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ.