ಸಾವರ್ಕರ್ ಬಗ್ಗೆ ಜನಜಾಗೃತಿ ಮೂಡಿಸಲು ರಥಯಾತ್ರೆ, ಬೇರಾವ ಉದ್ದೇಶ ಇಲ್ಲ: ಸಂಸದ ಪ್ರತಾಪ್ ಸಿಂಹ

ರಥಯಾತ್ರೆಯ ಹಿಂದೆ ಯಾವ ಉದ್ದೇಶವೂ ಇಲ್ಲ. ಸಾವರ್ಕರ್ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಲು ಯಾತ್ರೆ ಎಂದು ಮೈಸೂರಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

First Published Aug 23, 2022, 5:59 PM IST | Last Updated Aug 23, 2022, 5:59 PM IST

ಮೈಸೂರು (ಆ.23): ರಥಯಾತ್ರೆಯ ಹಿಂದೆ ಯಾವ ಉದ್ದೇಶವೂ ಇಲ್ಲ. ಸಾವರ್ಕರ್ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಲು ಯಾತ್ರೆ ಎಂದು ಮೈಸೂರಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ. ಮೈಸೂರಿನ 3  ಪ್ರಮುಖ ಸ್ಥಳಗಳಲ್ಲಿ ತಿಳಿಸಲಾಗುವುದು ಎಂದರು. ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಪ್ರತಾಪ್ ಸಿಂಹ  ನಮ್ಮಲ್ಲಿ ಆಸ್ತಿಕರು ಹಾಗೂ ನಾಸ್ತಿಕರು ಎಲ್ಲಾ ತರಹದ ಜನರಿದ್ದಾರೆ. ಸಾರ್ವಜನಿಕವಾಗಿ ಗುಡಿಗೆ ಹೋಗಬೇಕಾದ್ರೆ ಶಿಷ್ಟಾಚಾರ ಇರುತ್ತದೆ. ಆ ಶಿಷ್ಟಾಚಾರ ಪಾಲನೆ ಮಾಡಿ ಎಂದು ಪ್ರತಾಪ್ ಸಿಂಹ ಸಲಹೆ ನೀಡಿದರು. ನೀವು ನಿಮ್ಮ ಮನೆಯಲ್ಲಿ ಯಾವ ಆಹಾರವನ್ನಾದರೂ ತಿನ್ನಿ. ಆದ್ರೆ, ದೇವಸ್ಥಾನ ಪವಿತ್ರ ಸ್ಥಳ, ಅಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿರುತ್ತಾರೆ. ಅಲ್ಲಿಗೆ ಹೋಗುವವರು ಮಡಿ-ಮೈಲಿಗೆಯಿಂದ ಹೋಗುತ್ತಾರೆ. ಮೈಸೂರಿನ ಮೂಲೆ ಮೂಲೆಯಲ್ಲಿ ಚಾಮುಂಡಿ ಹಬ್ಬವನ್ನ ಆಚರಿಸುತ್ತಾರೆ.  ಬಹಳ ಮಡಿಯಿಂದ ಮೊಸರನ್ನವನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ‌. ನಂತರ ಮರಿ ಹೊಡೆದುಕೊಂಡು ತಿನ್ನುತ್ತಾರೆ. ಮರಿ ಹೊಡೆದು ತಿನ್ನುವ ಮೈಸೂರಿಗರೇ ಬೆಟ್ಟಕ್ಕೆ ಮಡಿಯಿಂದ ಹೋಗ್ತಾರೆ ಎಂದರು.