Belagavi: ತಾಯಿಗೆ ವಂಚಿಸಿದ ಮಗ, ಮಗ‌ನ ಹುಡುಕಿಕೊಡಿ ಎಂದು ಡಿಸಿ ಎದುರು ತಾಯಿಯ ಕಣ್ಣೀರು

- ಸಾಕಿ ಸಲುಹಿದ ತಾಯಿಯನ್ನೇ ಬೀದಿಯಲ್ಲಿ ನಿಲ್ಲುವಂತೆ ಮಾಡಿದ ಪಾಪಿ ಮಗ

- 18 ವರ್ಷದ ನಂತರ ಮಗ‌ನ ಹುಡುಕಿಕೊಡಿ ಅಂತಾ ತಾಯಿ ಅಲೆದಾಟ

- ಬೆಳಗಾವಿ ಜಿಲ್ಲಾಧಿಕಾರಿ ಮೊರೆ ಹೋದ ವೃದ್ಧ ತಾಯಿ ಕಣ್ಣೀರು
 

First Published Feb 27, 2022, 6:02 PM IST | Last Updated Feb 27, 2022, 6:02 PM IST

ಬೆಳಗಾವಿ (ಫೆ. 27): ಮಕ್ಕಳು ಚಿಕ್ಕವರಿದ್ದಾಗಲೇ ತಾಯಿ ತೀರಿಹೋದಳು ಅಂತಾ ತಂದೆ ಎರಡನೇ ಮದುವೆಯಾದ. ಬಂದ ಅಮ್ಮ ಹೆತ್ತಮ್ಮನಿಗಿಂತ ಹೆಚ್ಚು ಪ್ರೀತಿ ಕಾಳಜಿ ತೋರಿಸಿ ಅವರನ್ನ ಸಾಕಿ ಸಲುಹಿ ವಿದ್ಯಾವಂತರನ್ನಾಗಿ ಮಾಡಿದ್ಲು. ಸಾಕಿ ಬೆಳೆಸಿದ ಮಕ್ಕಳಿಗೆ ಸರ್ಕಾರಿ ಕೆಲಸವೂ ಸಿಗುತ್ತೆ, ಇದನ್ನ ಕೇಳಿದ ಸಾಕಿದ ಅಮ್ಮ ತನ್ನ ಬದುಕು ಬದಲಾಗುತ್ತೆ ಅಂದುಕೊಂಡಿದ್ದಳು ಆದ್ರೇ ಮಗ ಮಾತ್ರ ಶಾಕ್ ನೀಡಿದ್ದ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಖಾನಪೇಟದ ನಿವಾಸಿ ಬಸವಣ್ಣೆವ್ವಾ. ಗಂಡ ಗುರುಪಾದಪ್ಪ ಎಂಬುವವನಿಗೆ ಈ ಬಸವಣ್ಣೆವ್ವಾ ಎರಡನೇ ಹೆಂಡತಿಯಾಗಿದ್ದು ಈಕೆಗೆ ಮಕ್ಕಳಿಲ್ಲ. ಮೊದಲ ಹೆಂಡತಿಗೆ ಇದ್ದ ಎರಡು ಮಕ್ಕಳನ್ನ ತನ್ನ ಹೊಟ್ಟೆಯಲ್ಲೇ ಹುಟ್ಟಿದ ಮಕ್ಕಳಂತೆ ಸಾಕಿ ಸಲುಹಿದಾಕೆ ಈ ವೃದ್ಧೆ ಬಸವಣ್ಣೆವ್ವಾ. ಚಿಕ್ಕ ವಯಸ್ಸಿನಲ್ಲಿ ಏನೂ ಅರಿಯದೇ ಮಕ್ಕಳನ್ನ ಸಾಕಿ ದೊಡ್ಡವರನ್ನಾಗಿ ಮಾಡುವುದಷ್ಟೇ ಅಲ್ಲದೆ ಚೆನ್ನಾಗಿ ಓದಿಸಿ ಮಕ್ಕಳಿಗೆ ಸರ್ಕಾರಿ ನೌಕರಿ ಕೊಡಿಸುತ್ತಾರೆ. ಈ ವೇಳೆ ಹಿರಿಯ ಮಗ ಬಸಪ್ಪ ಆಸ್ತಿ ಪಾಲು ಮಾಡಿ ತಾಯಿ‌ ಪಾಲಿಗೆ ಎರಡು ಎಕರೆ ಜಮೀನು ಒಂದು ಮನೆ ನೀಡಿರ್ತಾನೆ. ಇದಾದ ಕೆಲ ವರ್ಷಗಳಲ್ಲಿ ಹಿರಿಯ ಮಗ ಬಸಪ್ಪ ಅನಾರೋಗ್ಯದಿಂದ ಮೃತಪಡ್ತಾನೆ. ಇತ್ತ ಕಿರಿಯ ಮಗ ಶಿಂಗಪ್ಪ ನೌಕರಿ ಮಾಡಲೆಂದು ಬೆಂಗಳೂರಿಗೆ ಹೋಗ್ತಾನೆ. ಹೀಗೆ ಹೋಗುವಾಗ ಪಾಪಿ ಮಗ ಶಿಂಗಪ್ಪ ತಾಯಿಯ ಹೆಸರಲ್ಲಿದ್ದ ಎರಡು ಎಕರೆ ಜಮೀನನ್ನ ನಂಬಿಸಿ ಸಹಿ ಮಾಡಿಸಿಕೊಂಡು ಮಾರಾಟ ಮಾಡಿ ಈ ಹಣ ನಿನ್ನ ಬ್ಯಾಂಕ್ ಖಾತೆಗೆ ಹಾಕ್ತೀನಿ ಅಂತಾ ಹೇಳಿ ಮೋಸ ಮಾಡಿದ್ದಾನೆ. 

ಮಗ ಮೋಸ ಮಾಡಿ ಹೋದ್ರು ತನಗೆ ಶಕ್ತಿ ಇರುವವರೆಗೂ ದುಡಿದು ಜೀವನ ನಡೆಸಿದ್ದ ಬಸವಣ್ಣೆವ್ವಾಗೆ ಇದೀಗ ವಯಸ್ಸಾಗಿ ಕೆಲಸ ಮಾಡಲು ಆಗುತ್ತಿಲ್ಲ. ತನ್ನನ್ನೇ ತಾನು ನಿಭಾಯಿಸಿಕೊಳ್ಳಲು ಆಗದ ಸ್ಥಿತಿಗೆ ಬಂದಿದ್ದಾರೆ. ಇನ್ನೊಬ್ಬರ ಆಸರೆ ಅಜ್ಜಿಗಿದ್ದು ಹೀಗಾಗಿ ಈ ವೃದ್ದಾಪ್ಯ ಕಾಲದಲ್ಲಿಯಾದ್ರೂ ಮಗನ ಜತೆಗೆ ಇರಬೇಕು ಅನ್ನೋ ಕಾರಣಕ್ಕೆ ಇದೀಗ ಮಗ ಶಿಂಗಪ್ಪನನ್ನ ಹುಡುಕಿಕೊಡಿ ಅಂತಾ ತಾಯಿ ಬಸವಣ್ಣೆವ್ವಾ ಕಣ್ಣೀರಿಡುತ್ತಿದ್ದಾಳೆ. 18 ವರ್ಷದಿಂದ ಗಂಡನ ಮುಖ ಸಹಿತ ನೋಡದ ಈಕೆ ಕೆಲ ದಿನಗಳ ಹಿಂದೆ ಶಿಂಗಪ್ಪನನ್ನ ರಾಮದುರ್ಗದಲ್ಲಿ ನೋಡಿದ್ದಾಳೆ. ಆತ ಧಾರವಾಡದಲ್ಲಿ ಕೆಲಸ ಮಾಡುತ್ತಿದ್ದಾನೆ ಅನ್ನೋದು ಗೊತ್ತಿದ್ದು ಆತನನ್ನ ಹುಡುಕಿಕೊಡಿ ಅಂತಾ ಡಿಸಿ ಬಳಿ ಬಂದು ಬಸವಣ್ಣೆವ್ವಾ ಮನವಿ ಮಾಡಿಕೊಂಡಿದ್ದಾಳೆ. 

Video Top Stories