ಮತದಾನಕ್ಕೆ ಅಡ್ಡಿ: ನಮಗೂ ಓಟ್ ಮಾಡಲು ಅವಕಾಶ ಕೊಡಿ ಎನ್ನುತ್ತಿರುವ ಕೋತಿಗಳು!

ರಾಣಿಬೆನ್ನೂರು(ಡಿ.05): ಮಂಗಗಳ ಕಾಟದಿಂದ ಮತದಾರರು ಮತಗಟ್ಟೆಗೆ ಬರಲು ಭಯಪಡುವಂತ ಪರಿಸ್ಥಿತಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನ ಗುಡಗೂರು ಗ್ರಾಮದಲ್ಲಿರುವ ಮತಗಟ್ಟೆಯ ಬಳಿ ಇಂದು(ಗುರುವಾರ) ನಡೆದಿದೆ. ಮತಗಟ್ಟೆಯ ಬಳಿ ಸುಮಾರು 50 ಕ್ಕೂ ಹೆಚ್ಚು ಮಂಗಗಳು ಓಡಾಡುತ್ತಿವೆ. ಹೀಗಾಗಿ ಮಂಗಗಳ ಸೈನ್ಯದಿಂದ ಮತದಾರರು ಬೇಸತ್ತಿದ್ದಾರೆ. ಮತಗಟ್ಟೆ ಸಂಖ್ಯೆ 19, 20 ರಲ್ಲಿ ಮತಚಲಾವಣೆಗೆ ಬರುತ್ತಿರುವ ಮತದಾರರು ಮಂಗಗಳ ಕಾಟದಿಂದ ಭಯದಿಂದ ಮತಚಲಾಯಿಸಲು ಹಿಂದೇಟು ಹಾಕುತ್ತಿದ್ದಾರೆ. 

ಮಂಗಗಳ ಕಾಟದಿಂದ ಆಗೊಬ್ಬ ಇಗೊಬ್ಬ ಮತದಾರರು ಮತ ಚಲಾವಣೆಗೆ ಬರುತ್ತಿದ್ದಾರೆ. ಮತದಾರರು ಮತ್ತು ಸಿಬ್ಬಂದಿಗಳಿಗೆ ಮಂಗಗಳು ವಿಪರೀತ ಕಾಟ ಕೊಡುತ್ತಿವೆ. 

First Published Dec 5, 2019, 10:01 AM IST | Last Updated Dec 5, 2019, 10:01 AM IST