Asianet Suvarna News Asianet Suvarna News

'ಸಂತ್ರಸ್ತೆ ದೂರು ಸ್ವೀಕರಿಸುವಲ್ಲಿ ಯಾವ ನಿರ್ಲಕ್ಷ್ಯ ಮಾಡಿಲ್ಲ'

* ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ ದೂರು ಸ್ವೀಕರಿಸದೇ ಮಂಗಳೂರು ಪೊಲೀಸರಿಂದ ‌ನಿರ್ಲಕ್ಷ್ಯ ಆರೋಪ

* ಮಂಗಳೂರಿನ ಕೊಣಾಜೆ ಪೊಲೀಸರ ವಿರುದ್ದ ಪರಿಷತ್ ನಲ್ಲಿ ಗಂಭೀರ ಆರೋಪ ಮಾಡಿದ್ದ ಎಂಎಲ್ ಸಿ ತೇಜಸ್ವಿನಿ

* ಎಂಎಲ್ ಸಿ ತೇಜಸ್ವಿನಿ ಆರೋಪ‌ದ ಬಗ್ಗೆ ಮಂಗಳೂರು ಕಮಿಷನರ್ ಪ್ರತಿಕ್ರಿಯೆ

* ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಂಗಳೂರು ಕಮಿಷನರ್ ಶಶಿಕುಮಾರ್ ಹೇಳಿಕೆ

ಮಂಗಳೂರು(ಸೆ. 23)  ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ ದೂರು ಸ್ವೀಕರಿಸದೇ ಮಂಗಳೂರು ಪೊಲೀಸರು ನಿರ್ಪಕ್ಷ್ಯ ಮಾಡಿದ್ದಾರೆ ಎನ್ನುವ ಆರೋಪಕ್ಕೆ ಮಂಗಳೂರು ಪೊಲೀಸರು ಉತ್ತರ ನೀಡಿದ್ದಾರೆ

ಮಂಗಳೂರಿನ ಕೊಣಾಜೆ ಪೊಲೀಸರ ವಿರುದ್ದ ಪರಿಷತ್ ನಲ್ಲಿ  ಎಂಎಲ್ ಸಿ ತೇಜಸ್ವಿನಿ ಗೌಡ ಆರೋಪ ಮಾಡಿದ್ದರು ಎಂಎಲ್ ಸಿ ತೇಜಸ್ವಿನಿ ಆರೋಪ‌ದ ಬಗ್ಗೆ ಮಂಗಳೂರು ಕಮಿಷನರ್ ಪ್ರತಿಕ್ರಿಯೆ ನೀಡಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಂಗಳೂರು ಕಮಿಷನರ್ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.

ಪರಿಷತ್ ನಲ್ಲಿ ಎಂಎಲ್ ಸಿಯವರು ಎತ್ತಿರೋ ಪ್ರಶ್ನೆಗೆ ನಾನು ಉತ್ತರಿಸೋದು ತಪ್ಪಾಗುತ್ತೆ. ಆದ್ರೆ ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಪೊಲೀಸ್ ಇಲಾಖೆ ವಿರುದ್ದ ಗಂಭೀರ ಆರೋಪ ಮಾಡಲಾಗ್ತಿದೆ. ನಮ್ಮ ಪೊಲೀಸ್ ಇಲಾಖೆ ವಿರುದ್ದ ಮಾಡ್ತೀರೋ ಆರೋಪ ಸತ್ಯಕ್ಕೆ ದೂರವಾದದ್ದು. ಸೆ.21ರಂದು ಯುವತಿ ಅನ್ಯಾಯವಾದ ಯುವಕನ ಮನೆಗೆ ಹೋದಾಗ ಅಲ್ಲಿ ಜಗಳವಾಗಿದೆ. ಹೀಗಾಗಿ ಆಕೆ‌ ಕೂಗಿಕೊಂಡು ಬಂದು ಬಸ್ ನಿಲ್ದಾಣದಲ್ಲಿ ಕೂತಿದ್ದಾಳೆ. ಅದನ್ನ ನೋಡಿದ ಸಾರ್ವಜನಿಕರು ಕಂಟ್ರೋಲ್ ರೂಂ ಸಂಪರ್ಕಿಸಿದಾಗ ಕೊಣಾಜೆ ಪೊಲೀಸರು ಠಾಣೆಗೆ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಭಿಕ್ಷಾಟನೆ ಮಾಡಿಕೊಂಡಿದ್ದ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ

ಆದ್ರೆ ಆಕೆ ಮೈಸೂರಿನವಳಾದ ಕಾರಣ ಅಲ್ಲೇ ದೂರು ಕೊಡೋದಾಗಿ ಹೇಳಿದ್ದಾಳೆ. ಆ ಬಳಿಕ ಆಕೆ ಊರಿಗೆ ಹೋಗೋದಾಗಿ ಹೇಳಿದಾಗ ನಮ್ಮ ಸಿಬ್ಬಂದಿಯೇ ಮೈಸೂರು ಬಸ್ ಹತ್ತಿಸಿದ್ದಾರೆ. ಆ ಬಳಿಕ ಆಕೆ ಮತ್ತೆ ವಕೀಲರನ್ನ ಸಂಪರ್ಕಿಸಿ ನಮ್ಮಲ್ಲಿ ಬಂದು ದೂರು ಕೊಟ್ಟಿದ್ದಾಳೆ. ದೂರಿನ ಆಧಾರದಲ್ಲಿ ಆರೋಪಿಯನ್ನ ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದೇವೆ ಎಂದುನ ತಿಳಿಸಿದ್ದಾರೆ.

ನಾನು ಯುವತಿ ಜೊತೆ ಮಾತನಾಡಿದಾಗಲೂ ಆಕೆ ಬಹಳ ಸ್ಪಷ್ಟವಾಗಿ ಹೇಳಿದ್ದಾಳೆ. ನಮ್ಮ ಸಿಬ್ಬಂದಿ ಸಮಾಧಾನ ಮಾಡಿ ಉತ್ತಮವಾಗಿ ವರ್ತಿಸಿದ್ದಾರೆ ಅಂದಿದ್ದಾಳೆ. ಪೊಲೀಸ್ ಇಲಾಖೆಯಿಂದ ಯಾವುದೇ ತೊಂದರೆ ಆಗಿಲ್ಲ ಅಂದಿದ್ದಾಳೆ. ನಮ್ಮ ಸಿಬ್ಬಂದಿ ಭಾಸ್ಕರ್ ಸಮಾಧಾನ ಮಾಡಿ ಊಟ ಕೊಟ್ಟಿದ್ದಾಗಿ ಹೇಳಿದ್ದಾಳೆ. ಯುವಕನಿಗೆ ಈಗಾಗಲೇ ಒಂದು ಮದುವೆಯಾಗಿದ್ದು, ಆತ ವಂಚಿಸಿದ್ದಾನೆ ಎಂದು ದೂರು ಕೊಟ್ಟಿದ್ದಾಳೆ. ಅಲ್ಲದೇ 35 ಲಕ್ಷ ಹಣ ಪಡೆದು ಆತ ವಂಚಿಸಿರೋ ಬಗ್ಗೆ ದೂರು ನೀಡಿದ್ದಾಳೆ. ನಮ್ಮ ಸಿಬ್ಬಂದಿ ಯಾವುದೇ ದೂರು ಪಡೆಯದೇ ನಿರ್ಲಕ್ಷ್ಯ ವಹಿಸಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. 

Video Top Stories