Asianet Suvarna News Asianet Suvarna News

ಶಾಸಕ UT ಖಾದರ್ ಇನ್ ಟ್ರಬಲ್..!

ಮಂಗಳೂರಿನಲ್ಲಿ 70 ವರ್ಷದ ವೃದ್ದರೊಬ್ಬರು ಕೊರೋನಾದಿಂದಾಗಿ ಮೃತಪಟ್ಟಿದ್ದರು. ಮಂಗಳೂರಿನ ಬೋಳಾರ ಮಸೀದಿಯ ಖಬರ್ಸ್ತಾನ್‌ನಲ್ಲಿ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲಾಯಿತು. ಈ ವೇಳೆ ಆರೋಗ್ಯ ಇಲಾಖೆಯ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ ಮಾಡುತ್ತಿದ್ದರು. ಈ ವೇಳೆ ಭಾಗವಹಿಸಿದ್ದ ಖಾದರ್, ಸ್ವತಃ ತಾವೇ ಗುದ್ದಲಿಯಿಂದ ಮಣ್ಣು ಅಗೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

ಮಂಗಳೂರು(ಜೂ.24): ಕೊರೋನಾ ವೈರಸ್‌ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಪಿಪಿಇ ಕಿಟ್ ಧರಿಸದೇ ಪಾಲ್ಗೊಳ್ಳುವ ಮೂಲಕ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಯು.ಟಿ. ಖಾದರ್ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಮಂಗಳವಾರವಷ್ಟೇ(ಜೂ.24) ಮಂಗಳೂರಿನಲ್ಲಿ 70 ವರ್ಷದ ವೃದ್ದರೊಬ್ಬರು ಕೊರೋನಾದಿಂದಾಗಿ ಮೃತಪಟ್ಟಿದ್ದರು. ಮಂಗಳೂರಿನ ಬೋಳಾರ ಮಸೀದಿಯ ಖಬರ್ಸ್ತಾನ್‌ನಲ್ಲಿ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲಾಯಿತು. ಈ ವೇಳೆ ಆರೋಗ್ಯ ಇಲಾಖೆಯ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ ಮಾಡುತ್ತಿದ್ದರು. ಈ ವೇಳೆ ಭಾಗವಹಿಸಿದ್ದ ಖಾದರ್, ಸ್ವತಃ ತಾವೇ ಗುದ್ದಲಿಯಿಂದ ಮಣ್ಣು ಅಗೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

ಸಚಿವ ಸುಧಾಕರ್‌ ಕುಟುಂಬಕ್ಕೆ ಆರೋಗ್ಯ ಕೋರಿ ವಿಶೇಷ ಪೂಜೆ

ಈ ಬಗ್ಗೆ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಖಾದರ್, ಅಲ್ಲಿ ಭೇಟಿ ನೀಡಿದಾಗ ನನಗೂ ಪಾಲ್ಗೊಳ್ಳಬೇಕು ಎನಿಸಿತು. ನಾನು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇನೆ. ಆದ್ರೆ ಕ್ವಾರಂಟೈನ್‌ಗೆ ಒಳಗಾಗುವುದಿಲ್ಲ ಎಂದಿದ್ದಾರೆ. ಖಾದರ್ ಮತ್ತೇನಂದ್ರು ಎನ್ನುವುದನ್ನು ನೀವೇ ನೋಡಿ..
 

Video Top Stories