ರಸ್ತೆಯಲ್ಲಿ ಅಡಚಣೆ: ಮಹಿಳೆಗೆ ಆವಾಜ್ ಹಾಕಿದ ಶಾಸಕ ಕುಮಾರ್ ಬಂಗಾರಪ್ಪ..!
ಪಟ್ಟಣದ ಏಕಮುಖ ರಸ್ತೆಯಲ್ಲಿ ಸಿಮೆಂಟ್ ಅಂಗಡಿಯ ಮಾಲೀಕರೊಬ್ಬರು ಗಿರಾಕಿಗಳಿಗೆ ಸಿಮೆಂಟ್ ತುಂಬಲು ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಿದ್ದರು. ಟ್ರಾಫಿಕ್ ಜಾಮ್ ಆಗಿದ್ದನ್ನು ಗಮನಿಸಿದ ಶಾಸಕ ಕುಮಾರ್ ಬಂಗಾರಪ್ಪ ಅಂಗಡಿಯವರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ಸೊರಬ(ಜು.25): ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಸೊರಬ ಶಾಸಕ ಕುಮಾರ್ ಬಂಗಾರಪ್ಪ ನಡು ರಸ್ತೆಯಲ್ಲಿ ಮಹಿಳೆಯೊಬ್ಬರಿಗೆ ಆವಾಜ್ ಹಾಕಿದ ಘಟನೆ ಸೊರಬ-ಸಾಗರ ರಸ್ತೆಯ ಸಿಮೆಂಟ್ ಅಂಗಡಿಯೊಂದರ ಮುಂದೆ ನಡೆದಿದೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಟ್ಟಣದ ಏಕಮುಖ ರಸ್ತೆಯಲ್ಲಿ ಸಿಮೆಂಟ್ ಅಂಗಡಿಯ ಮಾಲೀಕರೊಬ್ಬರು ಗಿರಾಕಿಗಳಿಗೆ ಸಿಮೆಂಟ್ ತುಂಬಲು ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಿದ್ದರು. ಟ್ರಾಫಿಕ್ ಜಾಮ್ ಆಗಿದ್ದನ್ನು ಗಮನಿಸಿದ ಶಾಸಕ ಕುಮಾರ್ ಬಂಗಾರಪ್ಪ ಅಂಗಡಿಯವರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ರೈಲ್ವೇ ಖಾಸಗಿಕರಣ ವಿರುದ್ಧ ಪೋಸ್ಟ್ ಕಾರ್ಡ್ ಅಭಿಯಾನ
ಶಾಸಕ ಕುಮಾರ್ ಬಂಗಾರಪ್ಪ ಅವರ ಈ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ