ಬಾಲಕಿಗೆ ಅಂಟಿದ ಮಹಾಮಾರಿ ಕೊರೋನಾ: ಮಂಡ್ಯದ ಚಿನಕುರುಳಿ ಸೀಲ್‌ಡೌನ್
11 ವರ್ಷದ ಬಾಲಕಿಗೆ ಮಹಾಮಾರಿ ಕೊರೋನಾ ಸೋಂಕುನ ದೃಡ| ಹಾವೇರಿ ಜಿಲ್ಲೆ ರಾಣಿಬೆನ್ನೂರು ಮೂಲದ ಬಾಲಕಿ| ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರುಳಿ ಗ್ರಾಮನ ಸೀಲ್‌ಡೌನ್| ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ಪೋಷಕರ ಜೊತೆಗೆ ಚಿನಕುರುಳಿ ಗ್ರಾಮಕ್ಕೆ ಬಂದಿದ್ದ ಬಾಲಕಿ|
ಮಂಡ್ಯ(ಮೇ.22): ಹಾವೇರಿ ಜಿಲ್ಲೆ ರಾಣಿಬೆನ್ನೂರಿನಿಂದ ಬಂದಿದ್ದ ಹನ್ನೊಂದು ವರ್ಷದ ಬಾಲಕಿಗೆ ಮಹಾಮಾರಿ ಕೊರೋನಾ ಸೋಂಕುನ ದೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರುಳಿ ಗ್ರಾಮವನ್ನ ಸೀಲ್‌ಡೌನ್ ಮಾಡಲಾಗಿದೆ.
2 ನಗರಗಳಿಗೆ ರೈಲು ಸೇವೆ ಶುರು, ಪ್ರಯಾಣಿಕರು ಪಾಲಿಸಬೇಕು ಈ ಷರತ್ತು
ಜೆಡಿಎಸ್ ಶಾಸಕ ಸಿ.ಎಸ್. ಪುಟ್ಟರಾಜು ಅವರ ಸ್ವಗ್ರಾಮ ಚಿನಕುರುಳಿಯಲ್ಲಿ ಸಿಲ್ ಡೌನ್ ಆಗಿದೆ. ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ಪೋಷಕರ ಜೊತೆಗೆ ಬಾಲಕಿ ಚಿನಕುರುಳಿ ಗ್ರಾಮಕ್ಕೆ ಬಂದಿದ್ದಳು. ಇದೀಗ ಬಾಲಕಿಗೆ ಕೊರೋನಾ ಸೋಂಕು ದೃಡಪಟ್ಟ ಹಿನ್ನೆಲೆಯಲ್ಲಿ ಗ್ರಾಮವನ್ನ ಸೀಲ್‌ಡೌನ್ ಮಾಡಲಾಗಿದೆ.