Asianet Suvarna News Asianet Suvarna News

'ನಮ್ಮನ್ ಮುಟ್ಟಿದ್ರೆ ಸಾಯ್ತೀರ': ಕ್ವಾರೆಂಟೈನ್‌ ಸೀಲ್ ತೋರಿಸಿ ಚೆಕ್‌ ಪೋಸ್ಟ್‌ ಸಿಬ್ಬಂದಿಗೆ ಬೆದರಿಕೆ..!

ಕೈಯಲ್ಲಿದ್ದ ಕ್ವಾರೆಂಟೈನ್ ಸೀಲ್ ತೋರಿಸಿ ಚೆಕ್‌ಪೋಸ್ಟ್‌ ಸಿಬ್ಬಂದಿಯನ್ನು ಬೆದರಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಅಕ್ರಮವಾಗಿ ಕೆ. ಆರ್. ಪೇಟೆ ಪ್ರವೇಶಿಸಿದ ಬೆಂಗಳೂರಿನ ಮೂವರು ಯುವಕರು ಪೊಲೀಸರನ್ನು ಬೆದರಿಸಿದ್ದಾರೆ.

ಮಂಡ್ಯ(ಏ.09): ಕೈಯಲ್ಲಿದ್ದ ಕ್ವಾರೆಂಟೈನ್ ಸೀಲ್ ತೋರಿಸಿ ಚೆಕ್‌ಪೋಸ್ಟ್‌ ಸಿಬ್ಬಂದಿಯನ್ನು ಬೆದರಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಅಕ್ರಮವಾಗಿ ಕೆ. ಆರ್. ಪೇಟೆ ಪ್ರವೇಶಿಸಿದ ಬೆಂಗಳೂರಿನ ಮೂವರು ಯುವಕರು ಪೊಲೀಸರನ್ನು ಬೆದರಿಸಿದ್ದಾರೆ.

ಬೆಂಗಳೂರು ಕಡೆಯಿಂದ ಮೂರು ಜನ ಅಕ್ರಮವಾಗಿ ಕೆ. ಆರ್. ಪೇಟೆ ಪ್ರವೇಶಿಸಿದ್ದಾರೆ. ನಮ್ಮನ್ನು ಮುಟ್ಟಿದರೆ ನಿಮಗೂ ಕೊರೋನಾ ಬರುತ್ತೆ ಎಂದು ಸಿಬ್ಬಂದಿಯನ್ನು ಬೆದರಿಸಿದ್ದಾರೆ. ತೆಂಡೇಕೆರೆ ಚೆಕ್‌ಪೋಸ್ಟ್‌ನಲ್ಲಿ ಘಟನೆ ನಡೆದಿದೆ.

ಸಚಿವರ ಮುಂದೆ ಅಳಲು ತೋಡಿಕೊಂಡ ಸಿಎಂ: ಇದು ಕ್ಯಾಬಿನೆಟ್ ಸಭೆಯ ಇನ್‍ಸೈಡ್ ಸ್ಟೋರಿ

ಆಟೋದಲ್ಲಿ ಬಂದ ಯುವಕರನ್ನು ಮಾಸ್ಕ್ ಕೇಳಿದಾಗ ನಮ್ಮನ್ನು ಮುಟ್ಟಿದರೆ ನೀವು ಸತ್ತೋಗ್ತೀರಾ ಎಂದು ಬೆದರಿಸಿದ್ದಾರೆ. ಆಟೀದಲ್ಲಿದ್ದ ಯುವಕರನ್ನು ಬೆನ್ನಟ್ಟಿದರೂ ಯುವಕರು ಸಿಕ್ಕಿಲ್ಲ.

Video Top Stories