Asianet Suvarna News Asianet Suvarna News

ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು, ಸತ್ತು ಹೋದವು ಲಕ್ಷಾಂತರ ಮೀನುಗಳು..

ದುಷ್ಕರ್ಮಿಗಳು ಕೆರೆಗೆ ವಿಷ ಹಾಕಿದ ಪರಿಣಾಮ ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳು ಸತ್ತು ದಡಕ್ಕೆ ಬಂದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ವೈ.ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. 

First Published Jan 8, 2021, 5:14 PM IST | Last Updated Jan 8, 2021, 5:14 PM IST

ಚಿಕ್ಕಮಗಳೂರು (ಜ. 08): ದುಷ್ಕರ್ಮಿಗಳು ಕೆರೆಗೆ ವಿಷ ಹಾಕಿದ ಪರಿಣಾಮ ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳು ಸತ್ತು ದಡಕ್ಕೆ ಬಂದಿರೋ ಘಟನೆ ಕಡೂರು ತಾಲೂಕಿನ ವೈ.ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. 

ಕೊನೆಗೂ ಲಸಿಕೆ ಬರಲು ಮುಹೂರ್ತ ಬಂತು, ಸಿಹಿಸುದ್ದಿ ಕೊಟ್ಟ ಆರೋಗ್ಯ ಸಚಿವರು..!

ವೈ.ಮಲ್ಲಾಪುರ ಗ್ರಾಮದ ದೊಡ್ಡನಾಯಕನಹಳ್ಳಿ ಕೆರೆಯನ್ನ ತಮ್ಮಯ್ಯ ಎಂಬ ಸ್ಥಳಿಯರು ಮೂರು ವರ್ಷಕ್ಕೆ ಟೆಂಡರ್ ಪಡೆದು ಸಾವಿರಾರು ಮೀನು ಮರಿಗಳನ್ನ ಬಿಟ್ಟು ಸಾಕಿದ್ದರು. ಮೀನುಗಳು ಕೂಡ ಹಿಡಿದು ಮಾರಾಟ ಮಾಡುವಷ್ಟು ದೊಡ್ಡವಾಗಿದ್ದವು. ಆದರೆ, ಮಂಗಳವಾರ ರಾತ್ರಿ ದುಷ್ಕರ್ಮಿಗಳು ಕೆರೆಗೆ ವಿಷಪ್ರಾಶಾನ ಮಾಡಿರುವುದರಿಂದ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಸತ್ತ ಮೀನುಗಳು ನೀರಲ್ಲಿ ತೇಲಿ ಬಂದು ದಡದಲ್ಲಿ ಶೇಖರಣೆಯಾಗಿವೆ. ಗಾಳಿ ಹೆಚ್ಚಿದಂತೆಲ್ಲಾ ನೀರಿನ ಅಲೆಯ ರಭಸಕ್ಕೆ ಸತ್ತ ಮೀನುಗಳು ಒಂದು ದಡದಿಂದ ಮತ್ತೊಂದು ದಡಕ್ಕೆ ತೇಲಿ ಹೋಗುತ್ತಿವೆ. ಇದೀಗ ತಮ್ಮಯ್ಯ ನಷ್ಟವನ್ನು ಭರಿಸಲಾಗದೇ ಕಣ್ಣೀರು ಹಾಕುತ್ತಿದ್ದಾರೆ. 
 

Video Top Stories