ದ್ವೇಷಕ್ಕೆ ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಹತ್ತಿ ಬೆಳೆಗೆ ಕಳೆನಾಶಕ ಹೊಡೆದ ಕಿರಾತಕರು!
ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ತೀರಾ ಸಂಕಷ್ಟದಲ್ಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿಯೇ ಧಾರವಾಡದಲ್ಲಿ ರೈತನೊಬ್ಬನ ಹತ್ತಿ ಬೆಳೆಗೆ ನೀಚರು ರಾತ್ರೋರಾತ್ರಿ ಕಳೆನಾಶಕ ಸಿಂಪಡಿಸಿ ಹಾನಿ ಮಾಡಿದ್ದಾರೆ.
ಧಾರವಾಡ (ಅ.27): ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ತೀರಾ ಸಂಕಷ್ಟದಲ್ಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿಯೇ ಧಾರವಾಡದಲ್ಲಿ ರೈತನೊಬ್ಬನ ಹತ್ತಿ ಬೆಳೆಗೆ ನೀಚರು ರಾತ್ರೋರಾತ್ರಿ ಕಳೆನಾಶಕ ಸಿಂಪಡಿಸಿ ಹಾನಿ ಮಾಡಿದ್ದಾರೆ. ಹೌದು! ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿನ ಗಂಗಪ್ಪ ಬಾರ್ಕಿ ಎಂಬ ರೈತರ ಜಮೀನಿನಲ್ಲಿ ನೀಚರು ಅಟ್ಟಹಾಸ ಪ್ರದರ್ಶಿಸಿದ್ದಾರೆ. ಒಂದೂವರೆ ಎಕರೆ ಪ್ರದೇಶದಲ್ಲಿ ಅವರು ಕಷ್ಟಪಟ್ಟು ಹತ್ತಿ ಬೆಳೆದಿದ್ದಾರೆ. ಇನ್ನೇನು ಹತ್ತಿ ಕಾಯಿಯೆಲ್ಲ ಒಡೆದು, ಇನ್ನೇನು ಹತ್ತಿ ಬಿಡಿಸಬೇಕು ಅನ್ನೋ ಸಿದ್ಧತೆಯಲ್ಲಿರೋವಾಗ ಗಂಗಪ್ಪ ಅವರಿಗೆ ಆಘಾತವೊಂದು ಎದುರಾಗಿದೆ. ಬರಗಾಲ ಇದ್ದರೂ ಗಂಗಪ್ಪ ನೀರು ಹಾಯಿಸಿ ಹತ್ತಿ ಬೆಳೆದಿದ್ದಾರೆ. ಸೊಂಪಾಗಿ ಬೆಳೆದ ಹತ್ತಿಯ ಫಸಲು ಇನ್ನೇನು ಕೈಸೇರಬೇಕು ಎನ್ನುವಷ್ಟರಲ್ಲಿ ಕಿಡಿಗೇಡಿಗಳು ರಾತ್ರೋರಾತ್ರಿ ಹತ್ತಿ ಬೆಳೆಗೆ ಕಳೆನಾಶಕ ಹೊಡೆದು ಪರಾರಿಯಾಗಿದ್ದಾರೆ. ಇದರಿಂದಾಗಿ ಬೆಳೆಯಲ್ಲಾ ಒಣಗುತ್ತಿದೆ.