Davangere: ನಿರಂತರ ಜ್ಯೋತಿ ಅಕ್ರಮ ಪ್ರಕರಣ: ಸುವರ್ಣ ನ್ಯೂಸ್ ವರದಿಗೆ ಸ್ಪಂದಿಸಿದ ಇಂಧನ ಸಚಿವರು
* ವರದಿ ಬೆನ್ನಲ್ಲೇ ನಿರಂತರ ಜ್ಯೋತಿ ಅಕ್ರಮ ಪ್ರಕರಣದ ತನಿಖೆ ಚುರುಕು
* ಹರಿಹರದ ಎರಡು ಫೀಡರ್‌ಗಳಲ್ಲಿ ಅಧಿಕಾರಿಗಳಿಂದ ಪರಿಶೀಲನೆ
* ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ರವರೆಗೆ ಅಕ್ರಮದ ಪರಿಶೀಲನೆ
ದಾವಣಗೆರೆ(ಫೆ.06): ನಿರಂತರ ಜ್ಯೋತಿ ಅಕ್ರಮ ಪ್ರಕರಣದ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗೆ ಇಂಧನ ಸಚಿವ ಸುನಿಲ್ ಕುಮಾರ್ ಸ್ಪಂದಿಸಿದ್ದಾರೆ. ವರದಿ ಬೆನ್ನಲ್ಲೇ ನಿರಂತರ ಜ್ಯೋತಿ ಅಕ್ರಮ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದೆ. ಹರಿಹರದ ಎರಡು ಫೀಡರ್‌ಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಎಳೆಹೊಳೆ ಹಾಗೂ ಹಿಂಡಸುಗಟ್ಟ ಫೀಡರ್‌ನಲ್ಲಿ ತನಿಖೆ ನಡೆಯುತ್ತಿದೆ. ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ರವರೆಗೆ ಅಕ್ರಮದ ಪರಿಶೀಲನೆ ನಡೆಯಲಿದೆ. ಎಳೆಹೊಳೆಯಲ್ಲಿ ಒಂದು ತಂಡ, ಹಿಂಡಸುಗಟ್ಟದಲ್ಲಿ ಎರಡು ತಂಡದಿಂದ ಪರಿಶೀಲನೆ ನಡೆಯಲಿದೆ.
Mandya News ಮಂಡ್ಯದಲ್ಲಿ ದಿನೇ ದಿನೇ ಹೆಚ್ಚಾಗ್ತಿದೆ ಪುಡಿ ರೌಡಿಗಳ ಹಾವಳಿ