ಪದ್ಮನಾಭನಗರ ಸಂಭ್ರಮದಲ್ಲಿ ಭಾಗಿಯಾದ ಸಚಿವ ಆರ್. ಅಶೋಕ್

ಬೆಂಗಳೂರಿನ ಅತಿದೊಡ್ಡ ಆಹಾರ, ಮನರಂಜನೆ ಮತ್ತು ಫ್ಯಾಷನ್‌ ಹಬ್ಬ ಪದ್ಮನಾಭ ನಗರ ಸಂಭ್ರಮದಲ್ಲಿ ಭಾಗಿಯಾದ ಸಚಿವ ಆರ್ ಅಶೋಕ ಮತ್ತು ನಟ ಸಿಹಿ ಕಹಿ ಚಂದ್ರು.

First Published Aug 28, 2022, 3:03 PM IST | Last Updated Aug 28, 2022, 3:03 PM IST

 ಪದ್ಮನಾಭ ನಗರದಲ್ಲಿ ಶುಕ್ರವಾರದಿಂದ ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಸಹಭಾಗಿತ್ವದ ‘ಪದ್ಮನಾಭ ನಗರ ಸಂಭ್ರಮ’ ವೈಭವ  ನಡೆಯುತ್ತಿದ್ದು, ಬೆಂಗಳೂರಿನ ಅತಿದೊಡ್ಡ ಆಹಾರ, ಮನರಂಜನೆ ಮತ್ತು ಫ್ಯಾಷನ್‌ ಹಬ್ಬವಾಗಿದೆ. ಈ ಹಬ್ಬದಲ್ಲಿ ನಟ ಸಿಹಿ ಕಹಿ ಚಂದ್ರು, ಸಚಿವ ಆರ್ ಅಶೋಕ್  ಭಾಗಿಯಾದ್ರು. ಪದ್ಮನಾಭ ನಗರದ ಕಾರ್ಮಲ್‌ ಶಾಲೆ ಪಕ್ಕದಲ್ಲಿರುವ ಶ್ರೀ ಎಂ.ಕೆ.ಪುಟ್ಟಲಿಂಗಯ್ಯ ಆಟದ ಮೈದಾನದಲ್ಲಿ ಈ ಸಂಭ್ರಮದ ಆಚರಣೆ ನಡೆಯುತ್ತಿದೆ. ಅಡುಗೆ ಮಹಾರಾಣಿ, ಮಕ್ಕಳಿಗೆ ಬೆಂಕಿ ರಹಿತ ಅಡುಗೆ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ಫ್ಯಾಮಿಲಿ ಫ್ಯಾಷನ್‌ ಶೋ, ಬೊಂಬಾಟ್‌ ಜೋಡಿ, ಮತ್ತು ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಎಲ್ಲ ವಯೋಮಾನದವರಿಗೂ ವಿವಿಧ ಸ್ಪರ್ಧೆಗಳಿದ್ದು, ಸಾರ್ವಜನಿಕರು ಭಾಗವಹಿಸಬಹುದಾಗಿದೆ. ಇಂದು ಹಬ್ಬದ ಕೊನೆಯ ದಿನವಾಗಿದೆ.

Video Top Stories