Asianet Suvarna News Asianet Suvarna News

ಚುಟು ಚುಟು ಅಂತೈತಿ ಹಾಡಿಗೆ ಕುಣಿದು ಕುಪ್ಪಳಿಸಿದ ಸಚಿವ ಚೌಹಾಣ

ಚುಟು ಚುಟು ಅಂತೈತಿ ಹಾಡಿಗೆ ಸಚಿವ ಚವ್ಹಾಣ ಭರ್ಜರಿ ನೃತ್ಯ| ರ‌್ಯಾಂಬೋ 2 ಚಿತ್ರದ ಚುಟು ಚುಟು ಅಂತೈತಿ ನನಗಾ ಚುಮು ಚುಮು ಆಗ್ತೈತಿ ಹಾಡು| ಬೀದರ್‌ನಲ್ಲಿ ನಡೆದ ರಾಜ್ಯ ಮಟ್ಟದ ಪಶು ಮೇಳದ ಸಮಾರೋಪ ಸಮಾರಂಭ|

ಬೀದರ್(ಫೆ.10):‘ಚುಟು ಚುಟು ಅಂತೈತಿ ನನಗ ಚುಮು ಚುಮು ಆಗ್ತೈತಿ' ಎಂಬ ರ‌್ಯಾಂಬೋ 2 ಚಲನಚಿತ್ರದ ಹಾಡಿಗೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ನೃತ್ಯ ಮಾಡಿದ ಘಟನೆ ಭಾನುವಾರ ನಗರದಲ್ಲಿ ನಡೆದಿದೆ. 

ನಗರದ ಪಶು ವೈದ್ಯಕೀಯ ವಿವಿಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಪಶು ಮೇಳದ ಸಮಾರೋಪ ಸಮಾರಂಭದಲ್ಲಿ ಸರಿಗಮಪ ಖ್ಯಾತಿಯ ಜವಾರಿ ಗಾಯಕ ಹನುಮಂತ ಲಮಾಣಿ  ಪ್ರಭು ಚವ್ಹಾಣ  ಧ್ವನಿಗೆ ಫಿದಾ ಆಗಿದ್ದಾರೆ. ಈ ವೇಳೆ ವೇದಿಕೆ ಮೇಲಿದ್ದ ಹಿರಿಯ ಅಧಿಕಾರಿಗಳು, ಜನಪ್ರನಿಧಿಗಳು ಸೇರಿದಂತೆ ನೆರೆದಿದ್ದ ಸಾವಿರಾರು ಪ್ರೇಕ್ಷಕರ ಮುಂದೆಯೇ ಮೈಮರೆತು ಕುಣಿದು ಕುಪ್ಪಳಿಸಿದ್ದಾರೆ.
 

Video Top Stories